ವಡೆಯನಪುರದಲ್ಲಿ ಹಸು ಮೇಲೆ ಹುಲಿ ದಾಳಿ

ಗುಂಡ್ಲುಪೇಟೆ ತಾಲೂಕಿನ ವಡೆಯನಪುರ ಗ್ರಾಮದಲ್ಲಿ ಹುಲಿ ದಾಳಿಯಿಂದ ಗಾಯಗೊಂಡ ಹಸು.
ಗುಂಡ್ಲುಪೇಟೆ ತಾಲೂಕಿನ ವಡೆಯನಪುರ ಗ್ರಾಮದಲ್ಲಿ ಹುಲಿ ದಾಳಿಯಿಂದ ಗಾಯಗೊಂಡ ಹಸು.
Published on

ಪ್ರಮುಖ ಮುಖ್ಯಾಂಶಗಳು

  • tiger-attacks
ಗುಂಡ್ಲುಪೇಟೆ: ತಾಲೂಕಿನ ವಡೆಯನಪುರ ಗ್ರಾಮದ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿದಾಳಿ ನಡೆಸಿ ಗಾಯಗೊಳಿಸಿದೆ.
ಗ್ರಾಮದ ಪರಮ ಶೆಟ್ಟಿ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದನ್ನು ಕಂಡ ರೈತರು ಜೋರಾಗಿ ಕೂಗಿದ್ದರಿಂದ ಹುಲಿ ಓಡಿಹೋಗಿದೆ. ಹಸುವಿನ ಕುತ್ತಿಗೆಗೆ ಗಾಯಗಳಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದೆ.
ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ: ಕಳೆದ ಹಲವಾರು ದಿನಗಳಿಂದ ಹುಲಿ ಓಡಾಡುವ ಬಗ್ಗೆ ಮಾಹಿತಿ ನೀಡಿದರೂ ಬಫರ್ ವಲಯದ ಅಧಿಕಾರಿಗಳು ಗಮನಹರಿಸಿಲ್ಲ. ಕುಟುಂಬದ ಜೀವನಾಧಾರವಾಗಿದ್ದ ಹಸು ಸಾವಿಗೀಡಾದರೆ ಕುಟುಂಬ ಬೀದಿಗೆ ಬೀಳುತ್ತದೆ. ಒಂದು ವೇಳೆ ಹಸು ಸತ್ತರೆ ಅದರ ಕಳೇಬರವನ್ನು ಸೋಮವಾರ ಬಂಡೀಪುರಕ್ಕೆ ಕೊಂಡೊಯ್ದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net