ನಾವು ಪೋಷಿಸಿದ ಗಿಡ ಪ್ರಕೃತಿಗೆ ದೊಡ್ಡ ಕೊಡುಗೆ

ಗುಂಡ್ಲುಪೇಟೆ ಸ್ಮಾರ್ಟ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಆರ್.ಕೆ.ಮಧು, ಗೋಪಾಲಕೃಷ್ಣ ಭಟ್ಟ, ರಾಜೇಶ್, ಶಿವಾನಂದಸ್ವಾಮಿ ಇತರರಿದ್ದರು.
ಗುಂಡ್ಲುಪೇಟೆ ಸ್ಮಾರ್ಟ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಆರ್.ಕೆ.ಮಧು, ಗೋಪಾಲಕೃಷ್ಣ ಭಟ್ಟ, ರಾಜೇಶ್, ಶಿವಾನಂದಸ್ವಾಮಿ ಇತರರಿದ್ದರು.
Published on
ಗುಂಡ್ಲುಪೇಟೆ: ಪಟ್ಟಣದ ಸ್ಮಾರ್ಟ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಭವಿಷ್ಯದಲ್ಲಿ ನಾವು ಉತ್ತಮ ಪರಿಸರ ನೋಡಲು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ನಾವು ನೆಟ್ಟು ಪೋಷಿಸಿದ ಗಿಡ ಪ್ರಕೃತಿಗೆ ದೊಡ್ಡ ಕೊಡುಗೆ ಆಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪರಿಸರದ ಮಹತ್ವ ಅರಿಯಬೇಕು. ಪೋಷಕರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವನ್ಯಜೀವಿಗಳ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ವನ್ಯಜೀವಿಗಳ ಉಳಿವಿಗೆ ಅರಣ್ಯ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಪ್ರಕೃತಿಯೊಂದಿಗೆ ಮಾನವನ ಸಂಬಂಧ ಕಡಿದುಕೊಳ್ಳುವಂತದ್ದಲ್ಲ. ಹೀಗಾಗಿ ಪ್ರಕೃತಿಯನ್ನು ಆರಾಧಿಸುವ ಮನಸ್ಥಿತಿ ಎಲ್ಲರಲ್ಲೂ ಬೇಕು ಎಂದರು.ಶಾಲೆಯ ಗೌರವ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ, ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಶಿವಾನಂದಸ್ವಾಮಿ ಮಾತನಾಡಿದರು. ಪ್ರಾಂಶುಪಾಲ ಕೆ.ಎಸ್.ಸಂತೋಷ್‌ಕುಮಾರ್, ಶೈಕ್ಷಣಿಕ ಸಂಯೋಜಕಿ ಆಶಾಆನಂದ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net