ಶಾಮನೂರು ಶಿವಶಂಕರಪ್ಪ ಅಗಲಿಕೆಯಿಂದ ಸಮಾಜಕ್ಕೆ ನಷ್ಟ

ಪಟ್ಟಣದ ಗುರುಮಲ್ಲೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕಚೇರಿಯಲ್ಲಿ ಸೋಮವಾರ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸವರಾಜು, ಪುಟ್ಟಣ್ಣ, ಮಹೇಶ್ ಕೆಂಪನಪಾಳ್ಯ, ತಿಮ್ಮರಾಜೀಪುರ ರಾಜು, ಬೂದಿತಿಟ್ಟು ಶಿವಕುಮಾರ್ ಇತರರು ಇದ್ದರು.
ಪಟ್ಟಣದ ಗುರುಮಲ್ಲೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕಚೇರಿಯಲ್ಲಿ ಸೋಮವಾರ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸವರಾಜು, ಪುಟ್ಟಣ್ಣ, ಮಹೇಶ್ ಕೆಂಪನಪಾಳ್ಯ, ತಿಮ್ಮರಾಜೀಪುರ ರಾಜು, ಬೂದಿತಿಟ್ಟು ಶಿವಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಬಸವರಾಜು ಹೇಳಿಕೆ
  • ಶ್ರದ್ಧಾಂಜಲಿ ಸಲ್ಲಿಕೆ
ಕೊಳ್ಳೇಗಾಲ: ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಸೋಮವಾರ ಪಟ್ಟಣದ ಗುರುಮಲ್ಲೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕಚೇರಿಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.
ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತ ಸಮಾಜದ ಕಣ್ಮಣಿ ಆಗಿದ್ದರು. ಕಳೆದ 20 ವರ್ಷದಿಂದ ಮಹಾಸಭೆಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಮಾಡಲು ಶ್ರಮಿಸಿದ್ದರು. ಭವನ ನಿರ್ಮಾಣಕ್ಕೆ ಒತ್ತು ನೀಡಿದ್ದರು ಎಂದರು.
ಶಾಮನೂರು ಶಿವಶಂಕರಪ್ಪ ಅವರು 1975ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. 1994ರಲ್ಲಿ ವಿಧಾನಸಭೆ ಸದಸ್ಯರಾದರು. ಬಳಿಕ 6 ಬಾರಿ ಶಾಸಕರಾಗಿ ಸಮಾಜಮುಖಿ ಕೆಲಸ ಮಾಡಿದರು. ಧಾರ್ಮಿಕ ಕಾರ್ಯಗಳನ್ನು ಮಾಡಿದರು. ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಿಂದ ನಮ್ಮ ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಕಾರ್ಯದರ್ಶಿ ಮಹೇಶ್ ಕೆಂಪನಪಾಳ್ಯ, ಉಪಾಧ್ಯಕ್ಷ ತಿಮ್ಮರಾಜೀಪುರ ರಾಜು, ಬೂದಿತಿಟ್ಟು ಶಿವಕುಮಾರ್, ಮಲ್ಲೇಶಪ್ಪ, ಯುಪಿಎಸ್ ಮಹದೇವಸ್ವಾಮಿ, ರವಿ ತೇರಂಬಳ್ಳಿ, ಮಂಜುನಾಥ್ ಕೆಂಪನಪಾಳ್ಯ, ಕಾಂತರಾಜು ಕುಣಗಳ್ಳಿ, ಪ್ರಭಾಕರ್ ರವಿ, ಬಸಪ್ಪ ಗುಂಡೆಗಾಲ, ಅಚ್ಗಾಲ್ ಮಹದೇವಸ್ವಾಮಿ, ಪಾಳ್ಯ ರಘು, ಜಿನಕನಹಳ್ಳಿ ಮಲ್ಲು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬ, ಗಾಯತ್ರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net