ಜಿಲ್ಲೆಯ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಅನ್ನ ಸುವಿಧಾ ಯೋಜನೆಗೆ ಒಟ್ಟು 2630 ಲಾನುಭವಿಗಳನ್ನು ಗುರುತಿಸಿ ಕಳುಹಿಸಲಾಗಿತ್ತು. ಅದರಲ್ಲಿ ಇಲಾಖೆಯೂ ಅನ್ನಸುವಿಧಾ ಯೋಜನೆಗೆ ಒಳಪಡುವ ಅರ್ಹ ಲಾನುಭವಿಗಳನ್ನು ಆಯ್ಕೆಮಾಡಿದ್ದು, ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 509, ಗುಂಡ್ಲುಪೇಟೆ 444, ಯಳಂದೂರು 251, ಕೊಳ್ಳೇಗಾಲ 378 ಹಾಗೂ ಹನೂರು ತಾಲೂಕಿನ 438 ಲಾನುಭವಿಗಳನ್ನು ಒಳಗೊಂಡಂತೆ ಒಟ್ಟು 2020 ಲಾನುಭವಿಗಳನ್ನು ಗುರತಿಸಿದೆ. ಅನ್ನ ಸುವಿಧಾ ಯೋಜನೆಯ ಅನುಷ್ಠಾನಕ್ಕಾಗಿ ಆಹಾರ ತಂತ್ರಾಂಶದಲ್ಲಿ ಅನ್ನ ಸುವಿಧಾ ಮಾಡ್ಯೂಲ್ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು ಅಭಿವೃದ್ಧಿಪಡಿಸಿದೆ. ಅದರಂತೆ ಯೂಸರ್ ಆಕ್ಸ್‌ಪ್ಟೆನ್ಸ್ ಟೆಸ್ಟಿಂಗ್ ಪೂರ್ಣಗೊಳಿಸಿದೆ. ಅನ್ನ ಸುವಿಧಾ ಮಾಡ್ಯೂಲ್ ಬಗ್ಗೆ ಈಗಾಗಲೇ ಆಹಾರ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಡಿಸೆಂಬರ್‌ನಲ್ಲಿ ಅನ್ನ ಸುವಿಧಾ ಯೋಜನೆಯ ನೋಂದಣಿ ಪ್ರಾರಂಭವಾಗಿದ್ದು, ನಗರಪ್ರದೇಶ ಮತ್ತು ಗ್ರಾಮೀಣ ಭಾಗದ ನ್ಯಾಯಲೆಬೆ ಅಂಗಡಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ಒಂಟಿಯಾಗಿರುವ ಹಿರಿಯ ನಾಗರಿಕರು, ವಯೋವೃದ್ಧರಿಗೆ ಉಚಿತವಾಗಿ ನೀಡುವ ಪಡಿತರವನ್ನು ಪಡೆದುಕೊಳ್ಳಲು ಇದು ಅತ್ಯಂತ ಸಹಕಾರಿಯಾಗಲಿದೆ.