ಸೋಷಿಯಲ್ ಮೀಡಿಯಾ ಸಮಾಜಕ್ಕೆ ಪೂರಕವೂ ಆಗಿದೆ ಮತ್ತು ಮಾರಕವೂ ಆಗಿದೆ. ಪ್ರಸ್ತುತ ದಿನಗಳಲ್ಲಂತೂ ಕೆಟ್ಟ ಕಮೆಂಟ್‌ಗಳು, ಲೈಕು, ಶೇರ್‌ಗಳಿಗಾಗಿ ಹಪಹಪಿಸುವ ವಿಡಿಯೋಗಳು, ದ್ವೇಷಕಾರುವ ವಿಚಾರಗಳೇ ಹೆಚ್ಚಾಗಿವೆ. ಇವುಗಳ ನಡುವೆ ಒಳ್ಳೆಯ ಸಂಗತಿಗಳಿಗೂ ಸಾಮಾಜಿಕ ಜಾಲತಾಣ ವೇದಿಕೆಯಾಗಿದ್ದು, ಯಳಂದೂರಿನಲ್ಲಿದ್ದ ಮಧ್ಯಪ್ರದೇಶದ ಪ್ರೀತಂ ಸಿಂಗ್ ಕುಟುಂಬ ಸೇರದ ಪ್ರಕರಣವೇ ಇದಕ್ಕೆ ಉದಾಹರಣೆ.