ದೇಮ ಸಾಮಾಜಿಕ ಸಮಾನತೆಯ ಅಸ್ಮಿತೆ

ಯಳಂದೂರು ತಾಲೂಕು ಆಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು. ಮದ್ದೂರು ದೊರೆಸ್ವಾಮಿ, ಎಸ್.ಸುಂದರ್ ಕಲಿವೀರ್, ಶಿವರಾಜ್, ಸಿದ್ದರಾಜು, ಲಕ್ಷ್ಮಣ್, ರೇವಣ್ಣ ಇದ್ದರು.

Published on
ಚಾಮರಾಜನಗರ: ಹಿರಿಯ ಸಾಹಿತಿ ದೇವನೂರು ಮಹಾದೇವ ಸಾಮಾಜಿಕ ಸಮಾನತೆಯ ಅಸ್ಮಿತೆ ಎಂದು ಕವಿ ಮದ್ದೂರು ದೊರೆಸ್ವಾಮಿ ಅಭಿಪ್ರಾಯಪಟ್ಟರು.
ಯಳಂದೂರು ತಾಲೂಕು ಆಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಹಿರಿಯ ಸಾಹಿತಿ ದೇವನೂರು ಮಹಾದೇವ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ಸಮಕಾಲೀನ ಸಮಸ್ಯೆಗಳಿಗೆ ಧ್ವನಿಯಾಗಿರುವ ದೇವನೂರು ಮಹಾದೇವ ಬರಹಗಾರರಾಗಿ ಜನರ ಕಷ್ಟ ಸುಖಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಸಾಮಾಜಿಕ ಸಮಾನತೆಯ ಅಸ್ಮಿತೆಯಾಗಿ ಅಗ್ರಬರಹಗಾರಾಗಿದ್ದಾರೆ. ಸಮಾಜದ ಸಮಸ್ಯೆಗಳು, ಅವುಗಳಿಗೆ ಕಂಡುಕೊಳ್ಳಬಹುದಾದ ಪರಿಹಾರವನ್ನು ಸರ್ಕಾರಗಳಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಶೋಷಿತ ಸಮಾಜದ ಪರವಾಗಿ ಧ್ವನಿ ಎತ್ತಿ ಮಾನವೀಯತೆಯುಳ್ಳ ಬರಹಗಾರರಾಗಿದ್ದಾರೆ. ದೇವನೂರು ಮಹಾದೇವ ಅವರ ಸಜ್ಜನಿಕೆ, ಸಮತಾವಾದ ಸಮಾಜಕ್ಕೆ ಅದರ್ಶವಾಗಿದೆ ಎಂದರು.
ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಎಸ್.ಸುಂದರ್ ಕಲಿವೀರ್, ಉಪನ್ಯಾಸಕ ಶಿವರಾಜ್, ಸಿದ್ದರಾಜು, ಲಕ್ಷ್ಮಣ್, ರೇವಣ್ಣ ಮತ್ತು ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net