ಬಸವ ಜಯಂತಿಯಲ್ಲಿ ಮೇಳೈಸಿದ ಗ್ರಾಮಸ್ಥರ ಶ್ರಮ

ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಸವ ಜಯಂತಿ ಮತ್ತು ಬಸವ ಪ್ರವಚನ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವೀರಗಾಸೆ, ನಂದಿಧ್ವಜ ಕಲಾವಿದರು ಮೆರವಣೆಯಲ್ಲಿ ಪಾಲ್ಗೊಂಡರು.
ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಸವ ಜಯಂತಿ ಮತ್ತು ಬಸವ ಪ್ರವಚನ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವೀರಗಾಸೆ, ನಂದಿಧ್ವಜ ಕಲಾವಿದರು ಮೆರವಣೆಯಲ್ಲಿ ಪಾಲ್ಗೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ನಂಜದೇವನಪುರದಲ್ಲಿ ವಿಜೃಂಭಣೆಯ ಆಚರಣೆ
  • ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಚಾಮರಾಜನಗರ: ತಾಲೂಕಿನ ನಂಜದೇವನಪುರದಲ್ಲಿ ಗುರುಮಲ್ಲೇಶ್ವರ ಭಿಕ್ಷದ ಮಠದ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಸಹಕಾರ ನೀಡಿ ಬಸವ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಶ್ರೀಮಠದ ಮಠಾಧ್ಯಕ್ಷ ರಾಜೇಂದ್ರಸ್ವಾಮಿಗಳ ಮುಂದಾಳತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಸವ ಜಯಂತಿ ಮತ್ತು ಬಸವ ಪ್ರವಚನ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ನಡೆಯಿತು.
ಇದಕ್ಕೆ ವೀರಗಾಸೆ, ಮಂಗಳವಾದ್ಯ, ನಂದಿಧ್ವಜ, ತಮಟೆ, ನಗಾರಿ ಕಲಾವಿದರು ಮೆರುಗು ತಂದರು. ಕಲಾತಂಡಗಳ ಸಮೇತ ನಡೆದ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗಿ ದೈವಿಕ ಕಳೆಯನ್ನು ಮೂಡಿಸಿತು. ಭಕ್ತರಿಗೆ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಮಹಾ ಪ್ರಸಾದ ವಿನಿಯೋಗ ಮಾಡಲಾಯಿತು. ಈ ಕಾರ್ಯಕ್ರಮದ ಆಯೋಜನೆಗಾಗಿಯೇ ಹಲವು ದಿನಗಳಿಂದ ಶ್ರಮವಹಿಸಿದ್ದ ಗ್ರಾಮಸ್ಥರು ತಮಗೆ ವಹಿಸಿದ್ದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಸಮಾಜ ಕಾಯಕ ಪ್ರಧಾನವಾಗಲಿ: ಬಸವಣ್ಣನವರು ಕಾಯಕ ಪ್ರಧಾನ ಸಮಾಜ ಕಟ್ಟಲು ಪ್ರಯತ್ನ ಮಾಡಿದರು ಎಂದು ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಂ.ಸಿದ್ದರಾಜಪ್ಪ ನೀಡಿದರು. ಬಸವ ಪ್ರವಚನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರೂ ಕೂಡ ಸೋಮಾರಿಗಳಾಗಿ ಬದುಕಬಾರದು. ಯಾವುದಾದರೂ ಒಂದು ಕೆಲಸ ಮಾಡಬೇಕು. ಇದನ್ನೇ ಬಸವಣ್ಣನವರು ಕಾಯಕ ತತ್ವ ಎಂದರು. ಇನ್ನೊಬ್ಬರಿಗೆ ನೀಡುವದನ್ನು ದಾಸೋಹ ತತ್ವವೆಂದು ಕರೆದರು. ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಚನ ಸಾಹಿತ್ಯ ರಚಿಸಿದರು. ಇದರಲ್ಲಿ ಸರ್ವ ಸಮಾನತೆ, ಶೋಷಣೆಯಿಂದ ಮುಕ್ತ, ಮಹಿಳೆಯರಿಗೆ ಅವಕಾಶ ನೀಡಿದ್ದರು ಎಂದು ಹೇಳಿದರು.
ಬಸವ ಪ್ರವಚನವನ್ನು ದೇವನೂರು ಗುರುಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠದ ಮಹಾಂತಸ್ವಾಮೀಜಿ ಶ್ರೀಮಠಕ್ಕೆ ಆಗಮಿಸಿ ಭಕ್ತರಿಗೆ ಆಶೀರ್ವಾದ ನೀಡಿದರು. ಶ್ರೀಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಪೀಠಾಧಿಪತಿ ಚನ್ನಬಸವೇಶ್ವರ ಸ್ವಾಮೀಜಿ, ಮೂಡುಗೂರು ಉದ್ದಾನೇಶ್ವರ ವಿರಕ್ತ ಮಠದ ಇಮ್ಮಡಿ ಉದ್ದಾನಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net