ಮುಸುಕಿನ ಜೋಳದ ಫಸಲು ನಾಶ

ಜಲ್ಲಿಪಾಳ್ಯದಲ್ಲಿ ಕಾಡಾನೆ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿನ್ನಪ್ಪ ಅವರ ಜಮೀನಿಗೆ ಮತ್ತೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶ ಪಡಿಸಿರುವುದು.
ಜಲ್ಲಿಪಾಳ್ಯದಲ್ಲಿ ಕಾಡಾನೆ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿನ್ನಪ್ಪ ಅವರ ಜಮೀನಿಗೆ ಮತ್ತೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶ ಪಡಿಸಿರುವುದು.
Published on
ಹನೂರು: ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ್ಲಿಪಾಳ್ಯದ ಜಮೀನಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡು ರೈತರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆನ್ನಲ್ಲೇ ಮತ್ತೇ ಅದೇ ಜಮೀನಿಗೆ ಸೋಮವಾರ ರಾತ್ರಿ ಕಾಡುಪ್ರಾಣಿಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ.
ಗ್ರಾಮದ ರೈತ ಚಿನ್ನಪ್ಪ ಎಂಬುವರು ಭಾನುವಾರ ರಾತ್ರಿ ಕಾವಲು ಕಾಯಲು ಜಮೀನಿಗೆ ತೆರಳಿದ್ದ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಲಗ್ಗೆ ಇಟ್ಟ ಕಾಡಾನೆಯೊಂದು ಮುಸುಕಿನ ಜೋಳದ ಫಸಲನ್ನು ತಿಂದು, ತುಳಿದು ನಾಶಪಡಿಸಿತ್ತು. ಜತೆಗೆ ರೈತನ ಮೇಲೆ ದಾಳಿ ನಡೆಸಿದ ಪರಿಣಾಮ ಕಾಲು ಮುರಿತಕ್ಕೊಳಗಾದ ಚಿನ್ನಪ್ಪ ಅವರು ತಮಿಳುನಾಡಿನ ಹಂದಿಯೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಿರುವಾಗ ರಾತ್ರಿ ಕಾಡುಪ್ರಾಣಿಗಳು ಇದೇ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿವೆ. ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಡದಂತೆ ಕ್ರಮವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net