ಮುಸುಕಿನ ಜೋಳದ ಕಡ್ಡಿ ಬೆಂಕಿಗೆ ಆಹುತಿ

ಚಿಕ್ಕಮಾಲಾಪುರದ ಬಳಿ ಆಕಸ್ಮಿಕ ಬೆಂಕಿ ತಗುಲಿ ಮುಸುಕಿನ ಜೋಳದ ಕಡ್ಡಿ ಆಹುತಿಯಾಗಿರುವುದು.
ಚಿಕ್ಕಮಾಲಾಪುರದ ಬಳಿ ಆಕಸ್ಮಿಕ ಬೆಂಕಿ ತಗುಲಿ ಮುಸುಕಿನ ಜೋಳದ ಕಡ್ಡಿ ಆಹುತಿಯಾಗಿರುವುದು.
Published on
ಹನೂರು: ತಾಲೂಕಿನ ಚಿಕ್ಕಮಾಲಾಪುರದ ಬಳಿ ಶನಿವಾರ ಆಕಸ್ಮಿಕ ಬೆಂಕಿ ತಗುಲಿ ಟ್ರಾೃಕ್ಟರ್‌ನಲ್ಲಿ ಸಾಗಿಸುತ್ತಿದ್ದ ಮುಸುಕಿನ ಜೋಳದ ಕಡ್ಡಿ ಆಹುತಿಯಾಗಿದೆ.
ಮಧ್ಯಾಹ್ನ 1ರ ವೇಳೆಯಲ್ಲಿ ಈ ಭಾಗದ ರೈತರೊಬ್ಬರೂ ಜಾನುವಾರುಗಳ ಮೇವಿಗಾಗಿ ಜೋಳದ ಕಡ್ಡಿಯನ್ನು ಖರೀದಿಸಿ ಟ್ರಾೃಕ್ಟರ್‌ನಲ್ಲಿ ಸಾಗಿಸುತ್ತಿದ್ದರು.
ಈ ವೇಳೆ ಚಿಕ್ಕಮಾಲಾಪುರದ ಬಳಿ ಜೋಳದ ಕಡ್ಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ಕಾರಣ ಎಂದು ಹೇಳಲಾಗುತ್ತಿದೆ. ಜ್ವಾಲೆ ವ್ಯಾಪಿಸುತ್ತಿದ್ದಂತೆ ಚಾಲಕ ಟ್ರಾೃಕ್ಟರ್‌ನಿಂದ ಜೋಳದ ಕಡ್ಡಿಯನ್ನು ನೆಲಕ್ಕೆ ಸುರಿಸಿ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ತಿಳಿದ ಗ್ರಾಮದ ಚಂದ್ರು ಎಂಬುವರು ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಸಿಬ್ಬಂದಿ ಬರುವಷ್ಟರೊಳಗೆ ಬಹುತೇಕ ಜೋಳದ ಕಡ್ಡಿ ಬೆಂಕಿಗೆ ಆಹುತಿಯಾಗಿತ್ತು. ಬಳಿಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಆನಂದ್‌ಕುಮಾರ್, ಅಶೋಕ್, ಹರ್ಷ ಹಾಗೂ ಅನಿಲ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net