ನಮ್ಮ ದೇಶದ ಸಂವಿಧಾನ ಪ್ರಜಾಪ್ರಭುತ್ವದ ಆತ್ಮ

ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದಲ್ಲಿ  ಸಂವಿಧಾನ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಚ್.ಎನ್.ಸ್ವಾಮಿ, ದಡದಹಳ್ಳಿ ರಮೇಶ್,  ನಟರಾಜ್, ಮಹದೇವಸ್ವಾಮಿ, ಸುಬ್ರಹ್ಮಣ್ಯ, ರೇಣುಕಾ ಇನ್ನಿತರರಿದ್ದರು.
ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಸಂವಿಧಾನ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಚ್.ಎನ್.ಸ್ವಾಮಿ, ದಡದಹಳ್ಳಿ ರಮೇಶ್, ನಟರಾಜ್, ಮಹದೇವಸ್ವಾಮಿ, ಸುಬ್ರಹ್ಮಣ್ಯ, ರೇಣುಕಾ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎನ್.ಸ್ವಾಮಿ ಅಭಿಪ್ರಾಯ
  • ಸಂವಿಧಾನ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ
  • ದಡದಹಳ್ಳಿ ಮತ್ತು ಹೆಬ್ಬಸೂರು ಗ್ರಾಮದಲ್ಲಿ ಆಯೋಜನೆ
ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನ ಪ್ರಜಾಪ್ರಭುತ್ವದ ಆತ್ಮವಾಗಿದೆ ಎಂದು ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎನ್.ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ದಡದಹಳ್ಳಿ ಮತ್ತು ಹೆಬ್ಬಸೂರು ಗ್ರಾಮದಲ್ಲಿ ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಇಕೋ ಕ್ಲಬ್ ವತಿಯಿಂದ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಂವಿಧಾನ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಜೀವದ ಉಸಿರಾಗಿರುವುದು ಪ್ರಕೃತಿ, ಅದನ್ನು ಬೆಳೆಸಿ ಉಳಿಸುವುದು ನಮ್ಮ ಕರ್ತವ್ಯ ಪ್ರತಿಯೊಬ್ಬರ ಕೊಡುಗೆಯು ಪರಿಸರಕ್ಕೆ ಇರಬೇಕು. ಪರಿಸರ ಸಂರಕ್ಷಣೆಗೆ ಸಂವಿದಾನದಲ್ಲೇ ಒತ್ತು ನೀಡಲಾಗಿದೆ ಎಂದರು.
ರಾಜ್ಯ ಶಾಸ್ರ ಉಪನ್ಯಾಸಕ ಶಿವಸ್ವಾಮಿ ಮಾತನಾಡಿ, ಭಾರತದ ಸಂವಿಧಾನ ಸರ್ವಶ್ರೇಷ್ಠ ಸಂವಿಧಾನವಾಗಿದ್ದು, ಇತರೆ ದೇಶಗಳಿಗಿಂತ ಹೆಚ್ಚು ವಿಧಿಗಳನ್ನು ಹೊಂದಿರುವ ಬಹುದೊಡ್ಡ ಲಿಖಿತ ಸಂವಿಧಾನವಾಗಿದೆ. ಅದರ ಮಹತ್ವವನ್ನು ವಿದ್ಯಾರ್ಥಿದೆಸೆಯಲ್ಲಿಯೇ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಕ್ವಿಜ್ನಲ್ಲಿ ವಿಜೇತರಾದ ತಂಡಕ್ಕೆ ಮುಖಂಡ ದಡದಹಳ್ಳಿರಮೇಶ್ ಅವರು ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ನಟರಾಜ್, ಮುಖ್ಯಶಿಕ್ಷಕ ಮಹದೇವಸ್ವಾಮಿ, ಸುಬ್ರಹ್ಮಣ್ಯ, ರೇಣುಕಾ, ರಮೇಶ್, ರಾಘವೇಂದ್ರ, ಕಮಲಮ್ಮ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net