ಹನೂರು ಕ್ಷೇತ್ರವು ಶ್ರೀಮಲೆಮಹದೇಶ್ವರರು, ಸಿದ್ದಪ್ಪಾಜಿ, ಮಂಟೇಸ್ವಾಮಿ ಹಾಗೂ ಇನ್ನಿತರೆ ಪವಾಡ ಪುರುಷರು ನೆಲೆಸಿರುವ ಧಾರ್ಮಿಕ ಸ್ಥಳ. ಹಾಗಾಗಿ ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಕ್ಷೇತ್ರವು ತನ್ನದೆ ಆದ ಆಧ್ಯಾತ್ಮಿಕ ನೆಲೆಯನ್ನು ಒಳಗೊಂಡಿದೆ. ಗ್ರಾಮವು ಸಮೃದ್ಧಿಯಿಂದ ಕೂಡಿರಲಿ, ಉತ್ತಮ ಮಳೆ, ಬೆಳೆಯಾಗಲಿ, ಜನರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲಿ ಎನ್ನುವ ಉದ್ದೇಶದಿಂದ ಪ್ರತಿ ಗ್ರಾಮಗಳು ದೇಗುಲಗಳನ್ನು ಹೊಂದಿವೆ ಎಂದು ತಿಳಿಸಿದರು.