ಎಲ್ಲೆಡೆ ಸಂಭ್ರಮದ ಶ್ರೀರಾಮನವಮಿ ಆಚರಣೆ

ಯಳಂದೂರು ಪಟ್ಟಣದ ದೇವಾಂಗ ಬೀದಿಯಲ್ಲಿ ಶ್ರೀರಾಮನವಮಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ಯಳಂದೂರು ಪಟ್ಟಣದ ದೇವಾಂಗ ಬೀದಿಯಲ್ಲಿ ಶ್ರೀರಾಮನವಮಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • Sri Ram Navami
ಯಳಂದೂರು: ಪಟ್ಟಣವೂ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಶುಕ್ರವಾರ ಶ್ರೀರಾಮ ನವಮಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಪಟ್ಟಣದ ದೇವಾಂಗ ಬೀದಿ, ಬಳೇಪೇಟೆಯಲ್ಲಿರುವ ಶ್ರೀರಾಮ ಮಂದಿರ, ಯರಿಯೂರು, ಅಂಬಳೆ, ಬಿಳಿಗಿರಿರಂಗನಬೆಟ್ಟ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ರಾಮ ಮಂದಿರಗಳನ್ನು ತಳಿರು, ತೋರಣ, ಹೂವುಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಶ್ರೀರಾಮ ದೇವರ ಪಟವನ್ನು ವಿಶೇಷ ಹೂವುಗಳಿಂದ ಸಿಂಗರಿಸಿ ರಾಮನಾಮವನ್ನು ಹಾಡಿ, ನೈವೇದ್ಯಗಳನ್ನಿಟ್ಟು ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ನೀರುಮಜ್ಜಿಗೆ, ಪಾನಕ, ಕೊಸಂಬರಿಗಳನ್ನು ವಿತರಿಸಲಾಯಿತು. ಶತಮಾನದ ಐತಿಹ್ಯ ಇರುವ ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀರಾಮಮಂದಿರದಲ್ಲಿ ರಾಮದೇವರ ಪಟ್ಟಾಭಿಷೇಕ ನಡೆಯುವ ವಾಡಿಕೆ ಮುಂದುವರಿಯಿತು.
ವಿವಿಧೆಡೆ ಆಚರಣೆ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಶ್ರೀರಾಮನವಮಿ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಇದಕ್ಕಾಗಿ ಬೆಳಗ್ಗೆಯಿಂದಲೇ ಸಿದ್ಧತೆಗಳು ನಡೆದಿದ್ದವು. ಇದರ ನಿಮಿತ್ತ ವಿಷ್ಣುವಿನ ರೂಪವಾಗಿರುವ ಬಿಳಿಗಿರಂಗನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ವಿಶೇಷ ಭಕ್ಷ್ಯಗಳನ್ನಿಟ್ಟು ಪೂಜೆ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net