ಪ್ಯಾಸೆಂಜರ್ ಆಟೋ ಮಗುಚಿ ಆರು ಮಂದಿಗೆ ಗಾಯ

ಕೊಳ್ಳೇಗಾಲ ತಾಲೂಕಿನ ಸರಗೂರು ಗ್ರಾಮದ ಬಳಿ ಭಾನುವಾರ ಪ್ಯಾಸೆಂಜರ್ ಆಟೋ ಮಗುಚಿ ಗಾಯಗೊಂಡ ಪ್ರಯಾಣಿಕರಿಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಕೊಳ್ಳೇಗಾಲ ತಾಲೂಕಿನ ಸರಗೂರು ಗ್ರಾಮದ ಬಳಿ ಭಾನುವಾರ ಪ್ಯಾಸೆಂಜರ್ ಆಟೋ ಮಗುಚಿ ಗಾಯಗೊಂಡ ಪ್ರಯಾಣಿಕರಿಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • Six injured
ಕೊಳ್ಳೇಗಾಲ: ತಾಲೂಕಿನ ಸರಗೂರು ಗ್ರಾಮದ ಬಳಿ ಭಾನುವಾರ ಪ್ಯಾಸೆಂಜರ್ ಆಟೋ ಮಗುಚಿ ಚಾಲಕ ಸೇರಿದಂತೆ ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಸತ್ತೇಗಾಲ ಗ್ರಾಮದ ಪುಟ್ಟಮ್ಮ(60), ಮನೀಶ್(14), ಲಕ್ಷ್ಮಮ್ಮ (58), ಚಾಲಕ ಮಧು (55), ಪಟ್ಟಣದ ಮಂಜುಳಾ (35) ಹಾಗೂ ಮತ್ತೀಪುರ ಗ್ರಾಮದ ಮಹದೇವಮ್ಮ (70) ಗಾಯಗೊಂಡವರು. ಸತ್ತೇಗಾಲ ಗ್ರಾಮದಿಂದ ಕೊಳ್ಳೇಗಾಲ ಪಟ್ಟಣಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿದ್ದ ಪ್ಯಾಸೆಂಜರ್ ಆಟೋ ಸರಗೂರು ಗ್ರಾಮದ ಹೊರವಲಯದ ರಸ್ತೆಯಲ್ಲಿ ಮಗುಚಿದ ಪರಿಣಾಮ ಪ್ರಯಾಣಿಕರು ಗಾಯಗೊಂಡಿದ್ದರು. ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಹಾಗೂ ಚಾಮರಾಜನಗರ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net