ಸಿಮ್ಸ್ ಆಸ್ಪತ್ರೆ ಸಮಸ್ಯೆಗಳು ಅನಾವರಣ

ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುವ ಆಹಾರವನ್ನು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಪರಿಶೀಲಿಸಿದರು. ಡಾ.ಮಾರುತಿ ಹಾಗೂ ಇತರರು ಹಾಜರಿದ್ದರು.
ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುವ ಆಹಾರವನ್ನು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಪರಿಶೀಲಿಸಿದರು. ಡಾ.ಮಾರುತಿ ಹಾಗೂ ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Sims Hospital
ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಗೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಅನಿರೀಕ್ಷಿತವಾಗಿ ಮಂಗಳವಾರ ಭೇಟಿ ನೀಡಿದ್ದ ವೇಳೆ ಸಿಮ್ಸ್ ಆಸ್ಪತ್ರೆಯ ಸಮಸ್ಯೆಗಳು ಅನಾವರಣಗೊಂಡವು.
ನಗರದ ಹೊರ ವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದ ವಾರ್ಡ್‌ಗೆ ಕೃಷ್ಣ ಅವರು ಮೊದಲು ಭೇಟಿ ನೀಡಿ, ಒಳರೋಗಿಗಳಿಗೆ ನೀಡಲಾಗುವ ಊಟದ ಮಾಹಿತಿ ಪುಸ್ತಕವನ್ನು ಪರಿಶೀಲಿಸಿದರು. ಪ್ರತಿಯೊಂದು ವಾರ್ಡ್‌ಗಳಿಗೆ ನೀಡುವ ಆಹಾರದ ವರದಿಯನ್ನು ನೀಡುವಂತೆ ಸೂಚಿಸಿದರು. ರೋಗಿಗಳಿಗೆ ನೀಡುವ ಆಹಾರದ ಮೆನು ಚಾರ್ಟ್ ಅನ್ನು ಎ4 ಶೀಟ್‌ನಲ್ಲಿ ಬರೆದು ಅಂಟಿಸಿರುವುದನ್ನು ಕಂಡು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ವಾರ್ಡ್‌ನಲ್ಲಿ ಪ್ರತಿಯೊಬ್ಬರಿಗೂ ಮೆನು ಚಾರ್ಟ್ ಕಾಣುವಂತೆ ದೊಡ್ಡದಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದರು. ಬಳಿಕ ಹಲವಾರು ರೋಗಿಗಳ ಯೋಗಕ್ಷೇಮ ವಿಚಾರಿಸಿ, ಊಟದ ವೇಳೆ ಒಂದೇ ಚಪಾತಿ ನೀಡಲಾಗುತ್ತದೆ ಎಂಬ ದೂರುಗಳು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ರೋಗಿಗಳಿಗೆ ಮೆನು ಪ್ರಕಾರವಾಗಿ ಊಟ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿದರು. ಸ್ವತಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಚಿದಂಬರ ಅವರು ಅನ್ನ-ಸಾಂಬಾರ್ ಊಟ ಮಾಡಿ, ಸಾಂಬಾರ್‌ನಲ್ಲಿ ಉಪ್ಪು-ಕಾರ ಇಲ್ಲ ಎಂದು ತಿಳಿಸಿದರು.
ಡಾ.ಎಚ್.ಕೃಷ್ಣ ಅವರು ಪ್ರತಿಕ್ರಿಯಿಸಿ, ರೋಗಿಗಳಿಗೆ ಅಗತ್ಯವಾದ ಆಹಾರವನ್ನು ನೀಡಬೇಕು. ಇಲ್ಲವಾದರೆ ಈಗ ಕಾರ್ಯನಿರ್ವಹಿಸುತ್ತಿರುವವರ ಟೆಂಡರ್ ರದ್ದುಗೊಳಿಸಿ, ಬೇರೆಯವರಿಗೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್, ಆಡಳಿತಾಧಿಕಾರಿ ಡಾ.ಮಾರುತಿ, ಡಾ.ಅಭಿಷೇಕ್, ಡಾ.ಮಂಜುನಾಥ್ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ರೋಗಿಗಳಿದ್ದಲ್ಲಿ ಆಹಾರ ನೀಡಿ: ಆಸ್ಪತ್ರೆಯ ವಾರ್ಡ್‌ಗಳಲ್ಲಿ ಇರುವ ರೋಗಿಗಳ ಬಳಿಗೆ ಆಹಾರವನ್ನು ನೀಡಬೇಕೆ ಹೊರತು, ಯಾವುದೇ ಕಾಣಕ್ಕೂ ಒಂದು ಕಡೆಯಲ್ಲಿ ನಿಂತು ಅವರನ್ನು ಸಾಲುಗಟ್ಟಿಸಿ ಆಹಾರ ನೀಡಬಾರದು ಎಂದು ಡಾ.ಎಚ್.ಕೃಷ್ಣ ಸೂಚಿಸಿದರು.
ಈ ವೇಳೆ ಅಂಗವಿಕಲ ರಮೇಶ್ ಮಾತನಾಡಿ, ಆಸ್ಪತ್ರೆಯಲ್ಲಿ ಅಂಗವಿಕಲರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲ. ಆಗಾಗ ಲ್‌ಟಿ ಕೆಟ್ಟು ಹೋಗುತ್ತಿದ್ದು, ಮೇಲಿನ ಮಹಡಿಗೆ ಹೋಗಲು ತೊಂದರೆಯಾಗುತ್ತಿದೆ. ನಮಗೆ ವ್ಹೀಲ್‌ಚೇರ್ ಕೂಡ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ರಕ್ತ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ, ರಕ್ತ ಪರೀಕ್ಷೆ ವರದಿ ನೀಡುವುದು ತಡವಾಗುತ್ತಿರುವುದರ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೃಷ್ಣ ಪ್ರಶ್ನಿಸಿದರು. ಬೇಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸುವವರ ವಿರುದ್ಧ ಸೂಕ್ತ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಸಿದರು.
ವಿವಿಧ ಇಲಾಖೆ ಅಧಿಕಾರಿಗಳಿಗೆ ತರಾಟೆ : ನಗರದ ಪ್ರವಾಸಿ ಮಂದಿರದಲ್ಲಿ ಡಾ.ಎಚ್.ಕೃಷ್ಣ ಅವರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅವರು ಸೋಮವಾರವೇ ಸಂತೆಮರಹಳ್ಳಿ, ಆಹಾರ ಇಲಾಖೆ ಗೋಡೌನ್‌ಗಳು, ಆದರ್ಶ ವಿದ್ಯಾಲಯ, ಪರಿಶಿಷ್ಟ ವರ್ಗಗಳ ಮೆಟ್ರಕ್ ನಂತರದ ಹಾಸ್ಟೆಲ್ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜುಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಅಲ್ಲಿನ ಅವ್ಯವಸ್ಥೆಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗೋಡೌನ್‌ಗಳಲ್ಲಿ ಸಿಸಿ ಕ್ಯಾಮರಾ, ಅಗ್ನಿಶಾಮಕ ಉಪಕರಣ ಇತರ ಸೌಲಭ್ಯಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಾಲಕರ ಕಾಲೇಜಿನಲ್ಲಿ ಇರುವ ಶೌಚಗೃಹ ಗಬ್ಬುನಾರುತ್ತಿದ್ದು, ಈವರೆಗೂ ಅವುಗಳನ್ನು ಸ್ವಚ್ಛಗೊಳಿಸಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಪರಿಶಿಷ್ಟ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಈ ಕೂಡಲೇ ಅವುಗಳನ್ನು ಸರಿಪಡಿಸಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಲಾನುಭವಿಗಳಿಗೆ ಕರೆ: ತಾಲೂಕಿನ ಹರದನಹಳ್ಳಿ ರೈತ ಸಂಪರ್ಕಕ್ಕೆ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಭೇಟಿ ನೀಡಿ, ಲಾನುಭವಿಗಳಿಗೆ ಕರೆ ಮಾಡಿ ಮಾತನಾಡಿ, ಸೌಲಭ್ಯಗಳು ತಲುಪಿರುವ ಕುರಿತು ಮಾಹಿತಿ ಪಡೆದುಕೊಂಡರು.
ಬಳಿಕ ಕೃಷಿ ಪರಿಕರಗಳನ್ನು ಪರಿಶೀಲಿಸಿದರು. ನಂತರ ಬಂಡಿಗೆರೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಲಾನುಭವಿಗಳಿಗೆ ಕರೆಮಾಡಿ ಅಂಗನವಾಡಿ ಕೇಂದ್ರಗಳಿಂದ ನೀಡುತ್ತಿರುವ ಸೌಲಭ್ಯಗಳು ತಲುಪಿದೆಯೇ ಎಂದು ಮಾಹಿತಿ ಪಡೆದುಕೊಂಡರು. ಆಹಾರ ಸಾಮಗ್ರಗಳ ದಾಸ್ತಾನು ಪರಿಶೀಲಿಸಿದರು. ಲಾನುಭವಿಗಳಿಗೆ ನೀಡಲಾದ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ದಾಖಲು ಮಾಡಿಲ್ಲ ಎಂದು ಅಂಗನವಾಡಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net