ಇದಕ್ಕೂ ಮೊದಲು ವೀರಯೋಧ ಶಿವಾನಂದ ವೃತ್ತದಿಂದ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಮಾರ್ಗವಾಗಿ ನೆಹರು ಪಾರ್ಕ್‌ವರೆಗೆ ನಂದಿಧ್ವಜ, ಮಂಗಳವಾದ್ಯಗಳೊಂದಿಗೆ ಭಾರತಮಾತೆಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಂಗಳ ಪಟ್ಟದ ಮಠದ ಷಡಕ್ಷರ ಸ್ವಾಮೀಜಿ, ರಾಘವೇಂದ್ರಮಠದ ರಾಜೇಶ್ವರಿ ಚಂದ್ರಶೇಖರ್, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ಟ, ಕೃಷಿಕ ಪ್ರಕಾಶ್ ಸೇರಿದಂತೆ ಸಾವಿರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದ್ದರು.