ಗೃಹಲಕ್ಷ್ಮಿ ಕುಟುಂಬದ ಮಹಿಳೆಗೆ 52 ಸಾವಿರ ರೂ. ಸಂದಾಯ

ಯಳಂದೂರು ಪಟ್ಟಣದ ಗ್ಯಾರಂಟಿ ಯೋಜನೆ ಸಮಿತಿಯ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಮಾತನಾಡಿದರು.
ಯಳಂದೂರು ಪಟ್ಟಣದ ಗ್ಯಾರಂಟಿ ಯೋಜನೆ ಸಮಿತಿಯ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಮಾತನಾಡಿದರು.
Published on

ಅನುಷ್ಠಾನ ಸಮಿತಿ ಅಧ್ಯಕ್ಷ ಕಿನಕನಹಳ್ಳಿ ಪ್ರಭುಪ್ರಸಾದ್ ಹೇಳಿಕೆ

ಯಳಂದೂರು: ಪಂಚ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಕುಟುಂಬದ ಪ್ರತಿ ಮಹಿಳೆಗೆ ಇದುವರೆವಿಗೆ 52 ಸಾವಿರ ರೂ. ಸಂದಾಯವಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಮಾಹಿತಿ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಗ್ಯಾರಂಟಿ ಯೋಜನೆಯ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಇದುವರೆವಿಗೆ ತಾಲೂಕಿನ ಉತ್ತಮ ಪ್ರಗತಿ ಸಾಧಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 25,657 ಕುಟುಂಬಗಳು ನೋಂದಣಿಯಾಗಿವೆ. ಈ ಯೋಜನೆಯ ಆರಂಭದಿಂದ ಇದುವರೆವಿಗೆ ರಾಜ್ಯದ ಫಲಾನುಭವಿ ಮಹಿಳೆಯರಿಗೆ ತಲಾ 52 ಸಾವಿರ ರೂ. ಹಣ ಸಂದಾಯವಾಗಿದೆ. ಇನ್ನೂ ಮೂರು ತಿಂಗಳ ಹಣವನ್ನು ನೀಡಬೇಕಿದ್ದು ಇದನ್ನು ಕೂಡ ಶೀಘ್ರದಲ್ಲೇ ಪಾವತಿಸಲಾಗುವುದು. ಅಲ್ಲದೆ ಗೃಹಜ್ಯೋತಿ ಯೋಜನೆಯಡಿಯಲ್ಲಿ 20,629 ನೋಂದಾಯಿತ ಕುಟುಂಬಳಿದ್ದು ಇವರಿಗೆ ವಿದ್ಯುತ್ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿಯಲ್ಲಿ ಇದುವರೆವಿಗೆ ನಮ್ಮ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯನ್ನು ಹೊಂದಲಾಗಿದೆ. ಶೇ. 62.02 ರಷ್ಟು ಮಹಿಳಾ ಪ್ರಯಾಣಿಕರು ಇದರ ಲಾಭವನ್ನು ಪಡೆದುಕೊಂಡಿದ್ದು 12.64 ಕೋಟಿ ಮಹಿಳೆಯರು ಈ ಯೋಜನೆಯ ಆರಂಭದಿಂದ ಇದುವರೆಗೆ ಪ್ರಯಾಣ ಮಾಡಿದ್ದಾರೆ. ತಾಲೂಕಿನಲ್ಲಿ ಯುವನಿಧಿ ಯೋಜನೆಯಡಿಯಲ್ಲಿ 451 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 342 ಫಲಾನುಭವಿಗಳಿಗೆ ಡಿಪ್ಲೊಮಾ ಪದವೀಧರರಿಗೆ 1.05 ಕೋಟಿ ರೂ. ಪದವೀಧರ ಫಲಾನುಭವಿಗಳಿಗೆ 1.06 ಕೊಟಿ ರೂ. ಹಣವನ್ನು ಪಾವತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಮಿತಿಯ ಸದಸ್ಯರಾದ ಅನಿತಾ ನಿರಂಜನ್, ಭಾಗ್ಯನಂಜಯ್ಯ, ಪ್ರಭುಶಂಕರ್, ಡಿ.ಎನ್.ನಾಗರಾಜು, ವಿಶ್ವ, ಶಿವರಾಜು, ವಿರೂಪಾಕ್ಷ, ಮಂಜುನಾಥ್, ನಂಜುಂಡಸ್ವಾಮಿ, ಮಹೇಶ್, ಬಾಬು ನಾಗಣ್ಣ, ಸಚಿನ್ ಸೆಸ್ಕ್‌ನ ಎಇಇ ಲಿಂಗರಾಜು, ಯೋಜನಾಧಿಕಾರಿ ಜಗದೀಶ್, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಶ್ರೀಧರ್, ಆಹಾರ ನಿರೀಕ್ಷಕ ಬಿಸಲಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರಸ್ವತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net