ರಾಮನಗುಡ್ಡೆ ದೊಡ್ಡ ಕೆರೆಗೆ ಶೀಘ್ರ ಬಾಗಿನ ಅರ್ಪಣೆ

 ರಾಮನಗುಡ್ಡೆ ದೊಡ್ಡಕೆರೆಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಸಿದರು. ಮಂಜೇಶ್, ರಾಜಣ್ಣ, ವೆಂಕಟೇಶ್ ಇತರರಿದ್ದರು.
ರಾಮನಗುಡ್ಡೆ ದೊಡ್ಡಕೆರೆಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಸಿದರು. ಮಂಜೇಶ್, ರಾಜಣ್ಣ, ವೆಂಕಟೇಶ್ ಇತರರಿದ್ದರು.
Published on
ಹನೂರು: ಕಾವೇರಿ ನೀರಿನಿಂದ ಭರ್ತಿಯಾಗಿರುವ ರಾಮನಗುಡ್ಡೆ ದೊಡ್ಡ ಕೆರೆಗೆ ಸದ್ಯದಲ್ಲೇ ಬಾಗಿನ ಅರ್ಪಿಸಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಮಂಗಲ ಸಮೀಪದ ರಾಮನಗುಡ್ಡೆ ದೊಡ್ಡಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ರೈತರು ಹಾಗೂ ಮುಖಂಡರೊಂದಿಗೆ ಕೆರೆ ಪರಿಶೀಲಿಸಿ ಮಾತನಾಡಿದರು. ಈ ಬಾರಿ ಮಳೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ ಜಲಾಶಯಗಳಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿದೆ. ಆದರೆ, ಅಗತ್ಯ ಕ್ರಮವಹಿಸಿದ್ದರಿಂದ ರಾಮನಗುಡ್ಡೆ ಕೆರೆಗೆ ಕಾವೇರಿ ನೀರನ್ನು ತುಂಬಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಗೊಂಡಿದ್ದು ಈ ಭಾಗದ ರೈತರಿಗೆ ಹಾಗೂ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅನುಕೂಲವಾಗಿದೆ ಎಂದರು.
ಉದ್ದನೂರಿನ ಹುಬ್ಬೆಹುಣಸೆ ದೊಡ್ಡಕೆರೆಗೂ ಕಾವೇರಿ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. 490 ಕೋಟಿ ರೂ.ವೆಚ್ಚದ ಉಡುತೊರೆಹಳ್ಳ ಜಲಾಶಯ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಬಳಿಕ ರಾಮನಗುಡ್ಡೆ ಕೆರೆಯಿಂದ ಹೆಚ್ಚುವರಿ ನೀರು ಹರಿಯುತ್ತಿರುವ ಹಳ್ಳವನ್ನು ವೀಕ್ಷಿಸಿ ಬೆಳೆದು ನಿಂತಿರುವ ಗಿಡ-ಗಂಟಿಗಳನ್ನು ತೆರವುಗೊಳಿಸುವಂತೆ ಹಾಗೂ ಉದ್ಯಾನ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪಿಎಸಿಸಿ ನಿರ್ದೇಶಕ ಮಂಜೇಶ್, ಮುಖಂಡರಾದ ರಾಜಣ್ಣ, ನಟರಾಜು, ಡಿ.ಕೆ.ರಾಜು, ಗೋವಿಂದ, ವೆಂಕಟೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net