ಒಳಮೀಸಲಾತಿಗೆ ಒತ್ತಾಯಿಸಿ ಬಲಗೈ ಸಮುದಾಯದಿಂದ ಪ್ರತಿಭಟನೆ

ಗುಂಡ್ಲುಪೇಟೆ ತಾಲೂಕು ಕಚೇರಿ ಎದುರು ಒಳಮೀಸಲಾತಿಗೆ ಒತ್ತಾಯಿಸಿ ಬಲಗೈ ಸಮುದಾಯದ ಮುಖಂಡರು ಎಂ.ಎಸ್.ತನ್ಮಯಿ ಅವರಿಗೆ ಮನವಿ ಸಲ್ಲಿಸಿದರು. ಡಾ.ನವೀನ್ ಮೌರ್ಯ, ರೇವಣ್ಣ, ಶಿವಮಾದಯ್ಯ, ಸುಭಾಷ್ ಮಾಡ್ರಹಳ್ಳಿ, ದೇವಯ್ಯ ರಾಘವಾಪುರ ಇದ್ದರು.
ಗುಂಡ್ಲುಪೇಟೆ ತಾಲೂಕು ಕಚೇರಿ ಎದುರು ಒಳಮೀಸಲಾತಿಗೆ ಒತ್ತಾಯಿಸಿ ಬಲಗೈ ಸಮುದಾಯದ ಮುಖಂಡರು ಎಂ.ಎಸ್.ತನ್ಮಯಿ ಅವರಿಗೆ ಮನವಿ ಸಲ್ಲಿಸಿದರು. ಡಾ.ನವೀನ್ ಮೌರ್ಯ, ರೇವಣ್ಣ, ಶಿವಮಾದಯ್ಯ, ಸುಭಾಷ್ ಮಾಡ್ರಹಳ್ಳಿ, ದೇವಯ್ಯ ರಾಘವಾಪುರ ಇದ್ದರು.
Published on
ಗುಂಡ್ಲುಪೇಟೆ: ಒಳಮೀಸಲಾತಿಗೆ ಒತ್ತಾಯಿಸಿ ಬಲಗೈ ಸಮುದಾಯದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಸಮಾವೇಶಗೊಂಡ ಸಮುದಾಯದವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮೆರವಣಿಗೆ ನಡೆಸುವ ಮೂಲಕ ತಾಲೂಕು ಕಚೇರಿಗೆ ಆಗಮಿಸಿದರು.
ಮುಖಂಡ ಡಾ.ನವೀನ್ ಮೌರ್ಯ ಮಾತನಾಡಿ, ಒಳಮೀಸಲಾತಿ ನಿಗದಿ ಸಂದರ್ಭದಲ್ಲಿ ಬಲಗೈ ಸಂಬಂಧಿತ ಜಾತಿಗಳಿಗೆ ಜನಸಂಖ್ಯೆಯಲ್ಲಿ ಹಾಗೂ ರೋಸ್ಟರ್ ಬಿಂದುವಿನಲ್ಲಿ ಬಾರಿ ಪ್ರಮಾಣದ ಅನ್ಯಾಯವಾಗುತ್ತಿದೆ. ಸರ್ಕಾರ ಶೇ.15 ಮೀಸಲಾತಿ ಪ್ರಮಾಣದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಿದರೆ ರಾಜ್ಯ ಸರ್ಕಾರವು ಹೊರಡಿಸಿರುವ ನಾಗಮೋಹನ್ ದಾಸ್ ವರದಿಯು ಹಲವಾರು ಲೋಪದೋಷಗಳಿರುವ, ಯಾವುದೇ ಮಾನದಂಡವನ್ನು ಅನುಸರಿಸದೆ, ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿಯ ಅದೇಶವನ್ನು ಪರಿಷ್ಕಸಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವ ಅಲೆಮಾರಿ/ಅರೆ ಅಲೆಮಾರಿ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ವಿವಿಧ ಇಲಾಖೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಇತರ ನೇಮಕಾತಿಯ ಪ್ರಾಧಿಕಾರಗಳಲ್ಲಿ 1 ಮತ್ತು 2 ಹುದ್ದೆಗಳಿದ್ದಾಗ ಮೀಸಲಾತಿ ನಿಗದಿಪಡಿಸುವ ಸಂದರ್ಭದಲ್ಲಿ ಎಸ್.ಸಿ. ಸಾಮಾನ್ಯ ಎಂದು ಪರಿಗಣಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರೇವಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಮಾದಯ್ಯ, ಸುಭಾಷ್ ಮಾಡ್ರಹಳ್ಳಿ, ದೇವಯ್ಯ ರಾಘವಾಪುರ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net