ಕ್ರಿಕೆಟ್ ಪಂದ್ಯ ವಿಜೇತರಿಗೆ ಬಹುಮಾನ ವಿತರಣೆ

ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಮಲ್ಲು ಬಹುಮಾನ ವಿತರಣೆ ಮಾಡಿದರು.ಎಲ್.ಮಂಜುನಾಥ್,  ದೊಡ್ಡ ಸ್ವಾಮಿ,  ಕುಮಾರ, ಪ್ರಕಾಶ್, ಜಯಸೂರ್ಯ, ವಿಕ್ಕಿ ಇತರರು ಇದ್ದರು.
ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಮಲ್ಲು ಬಹುಮಾನ ವಿತರಣೆ ಮಾಡಿದರು.ಎಲ್.ಮಂಜುನಾಥ್, ದೊಡ್ಡ ಸ್ವಾಮಿ, ಕುಮಾರ, ಪ್ರಕಾಶ್, ಜಯಸೂರ್ಯ, ವಿಕ್ಕಿ ಇತರರು ಇದ್ದರು.
Published on
ಗುಂಡ್ಲುಪೇಟೆ: ತಾಲೂಕಿನ ಚಿಕ್ಕ ತುಪ್ಪೂರುಗ್ರಾಮದಲ್ಲಿ ಯೂತ್ ಕಪ್ ಸೀಸನ್ 1 ಕ್ರಿಕೆಟ್ ಪಂದ್ಯಾವಳಿ ಮುಕ್ತಾಯವಾಯಿತು.
ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಬನ್ನಿತಾಳಪುರ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಲ್ಲು ವಿತರಣೆ ಮಾಡಿ ಮಾತನಾಡಿದರು.
ಎಲ್ಲ ಯುವಕರು ಅತ್ಯುತ್ತಮವಾಗಿ ಆಟವಾಡಿದ್ದು, ಗ್ರಾಮ ಮಟ್ಟದಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ವಿಜೇತರಾಗುವ ಮೂಲಕ ಗ್ರಾಮಕ್ಕೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಲ್.ಮಂಜುನಾಥ್, ದೊಡ್ಡ ಸ್ವಾಮಿ, ಕುಮಾರ, ಪ್ರಕಾಶ್, ಜಯಸೂರ್ಯ , ವಿಕ್ಕಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net