ಸೋಮವಾರ ದೇಗುಲದ ಮುಂಭಾಗ ರಥವನ್ನು ಸಿಂಗರಿಸುವ ಕಾರ್ಯವನ್ನು ಮಾಡಲಾಯಿತು. ಮಂಗಳವಾರ ಸ್ವಾಮಿಗೆ ರುದ್ರಾಭಿಷೇಕ, ರಾಜೋಪಚಾರ, ಮಹಾಮಂಗಳಾರತಿ, ಸಂಜೆ ಗೋಧೂಳಿ ಲಗ್ನದಲ್ಲಿ ಪೂಜೆ ನಂತರ ಗದಗದ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ನವಲಗುಂದ ಗವಿಮಠದ ಅಭಿನವ ಬಸವಲಿಂಗ ಮಹಾಸ್ವಾಮೀಜಿ, ಯಶವಂತನಗರದ ಗುರು ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ಮಹಾಸ್ವಾಮೀಜಿ ಅವರಿಂದ ಧ್ವಜಾರೋಹಣ ಕಾರ್ಯ ನಡೆಯಲಿದೆ.