ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್

ಶಾಸಕ ಎ.ಆರ್ ಕೃಷ್ಣಮೂರ್ತಿ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಎಂ.ಶೇಖರ್ ಎಂಬಾತನ ವಿರುದ್ಧ ಕಾನೂನು ಕ್ರಮವಹಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಸೋಮವಾರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದರು. ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಮುಖಂಡರಾದ ಸುರೇಶ್,ಪಾಪಣ್ಣ, ಲಿಂಗರಾಜು ಮತ್ತಿತರಿದ್ದರು.

Published on
ಕೊಳ್ಳೇಗಾಲ : ಶಾಸಕ ಎ.ಆರ್ ಕೃಷ್ಣಮೂತಿ ಅವರು ಚುನಾವಣೆಯಲ್ಲಿ ಗೆಲ್ಲುವಾಗ ಅವರ ಜತೆ ಹುಲಿ, ಸಿಂಹಗಳಿದ್ದವು. ಇವಾಗ ಅವರ ಜತೆ ನಾಯಿ, ನರಿಗಳಿವೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮವಹಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಸ್ಸಿ ವಿಭಾಗದ ಸಂಚಾಲಕ ಕೆ.ನಾಗರಾಜು ಸೋಮ ವಾರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಂಕನಪುರ ಬಡಾವಣೆ ನಿವಾಸಿ ಎಂ.ಶೇಖರ್ ಎಂಬಾತ ಕಳೆದ ಡಿ.21 ರಂದು ಫೇಸ್ ಬುಕ್‌ನಲ್ಲಿ ಶಾಸಕ ಎ.ಆರ್ ಕೃಷ್ಣಮೂರ್ತಿಗೆ ಅಪಮಾನವಾಗುವಂತೆ ಪೋಸ್ಟ್ ಹಾಕಿದ್ದಾರೆ. ಇದರಿಂದ ಎ.ಆರ್.ಕೃಷ್ಣಮೂರ್ತಿ ಮತ್ತು ಅವರ ಅಭಿಮಾನಿಗಳು, ಕಾರ್ಯಕರ್ತರು ಮತ್ತು ಮುಖಂಡರ ಮನಸ್ಸಿಗೆ ನೋವು ಮತ್ತು ಅವಮಾನವಾಗಿದೆ.
ಶೇಖರ್ ಎಂಬಾತ ಈ ಹಿಂದಿನಿಂದಲೂ ಕೊಳ್ಳೇಗಾಲ ಪಟ್ಟಣದಲ್ಲಿ ಒಂದಲ್ಲ ಒಂದು ರೀತಿ ಜಾಲತಾಣಗಳ ಮೂಲಕ ಸಮಸ್ಯೆಯನ್ನು ಹುಟ್ಟು ಹಾಕುತ್ತಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಈ ವೇಳೆ ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಸುರೇಶ್, ಮುಖಂಡ ಪಾಪಣ್ಣ, ಲಿಂಗರಾಜು, ಸೋಮಣ್ಣ, ಸಿದ್ದಯ್ಯ, ಪ್ರಭುಸ್ವಾಮಿ, ಜಗದೀಶ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net