ಕಾಡಂಚಿನಲ್ಲಿ ಪ್ಲಾಸ್ಟಿಕ್,ಆಹಾರ ತ್ಯಾಜ್ಯಗಳ ರಾಶಿ

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಕಾರೇಮಾಳದ ಜಮೀನಿನಲ್ಲಿ ಕಂಟ್ರಿಕ್ಲಬ್‌ನವರು ಸುರಿದಿರುವ ತ್ಯಾಜ್ಯದ ರಾಶಿಗಳು.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಕಾರೇಮಾಳದ ಜಮೀನಿನಲ್ಲಿ ಕಂಟ್ರಿಕ್ಲಬ್‌ನವರು ಸುರಿದಿರುವ ತ್ಯಾಜ್ಯದ ರಾಶಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಬಂಡೀಪುರ ಸಫಾರಿ ಆರಂಭದ ಹಿನ್ನೆಲೆ
ಗುಂಡ್ಲುಪೇಟೆ: ಬಂಡೀಪುರದಲ್ಲಿ ಸಫಾರಿ ಆರಂಭವಾಗುತ್ತಿದ್ದಂತೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆ ರೆಸಾರ್ಟ್ ಗಳಿಂದ ಪ್ಲಾಸ್ಟಿಕ್ ಹಾಗೂ ಆಹಾರ ತ್ಯಾಜ್ಯಗಳನ್ನು ಕಾಡಂಚಿನಲ್ಲಿ ಸುರಿಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರಸೂಕ್ಷ್ಮ ಪ್ರದೇಶದಲ್ಲಿರುವ ರೆಸಾರ್ಟ್‌ಗಳಲ್ಲಿರುವ ಹಳೆಯ ಹಾಸಿಗೆಗಳು, ಪ್ರವಾಸಿಗರು ಊಟಮಾಡಿಬಿಟ್ಟ ಆಹಾರ ಪದಾರ್ಥಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಾಡಂಚಿನ ಜಮೀನಿಗೆ ಸುರಿಯಲಾಗಿದೆ. ಬುಧವಾರ ರಾತ್ರಿ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡುಬಂದ ತ್ಯಾಜ್ಯವನ್ನು ಜಮೀನಿನಲ್ಲಿ ಸುರಿಯುತ್ತಿರುವುದನ್ನು ಕಂಡ ಜಮೀನಿನ ಮಾಲೀಕ ಕಾರೆಮಾಳದ ಬೊಮ್ಮ ಅವರು ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸ್ಥಳೀಯರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಭಾರೀ ಪ್ರಮಾಣದಲ್ಲಿ ರಾಶಿಹಾಕಿದ್ದ ತ್ಯಾಜ್ಯವನ್ನು ವನ್ಯಜೀವಿಗಳು ತಿಂದು ಹರಡಿವೆ. ಆದರೂ ಅರಣ್ಯ ಇಲಾಖೆಯವರು ಕಂಟ್ರಿ ಕ್ಲಬ್ ಆಡಳಿತವರ್ಗ ಹಾಗೂ ತ್ಯಾಜ್ಯವನ್ನು ತಂದು ಸುರಿದ ಟ್ರ್ಯಾಕ್ಟರ್ ವಿರುದ್ದ ಕ್ರಮಕೈಗೊಂಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net