ಗಾಯಾಳು ಮಕ್ಕಳ ಆಸ್ಪತ್ರೆ ವೆಚ್ಚ ಭರಿಸಿ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಸಿ.ಎಸ್.ನಿರಂಜನಕುಮಾರ್ ಅಧಿಕಾರಿಗಳ ಜತೆ ಚರ್ಚಿಸಿದರು. ಸ್ನೇಹಾರಾಜ್, ಗಾಯತ್ರಿ, ಎಂ..ಎಸ್.ತನ್ಮಯಿ, ಜಯಕುಮಾರ್, ಸಿ.ಮಹದೇವಪ್ರಸಾದ್ ಇದ್ದರು.
ಗುಂಡ್ಲುಪೇಟೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಸಿ.ಎಸ್.ನಿರಂಜನಕುಮಾರ್ ಅಧಿಕಾರಿಗಳ ಜತೆ ಚರ್ಚಿಸಿದರು. ಸ್ನೇಹಾರಾಜ್, ಗಾಯತ್ರಿ, ಎಂ..ಎಸ್.ತನ್ಮಯಿ, ಜಯಕುಮಾರ್, ಸಿ.ಮಹದೇವಪ್ರಸಾದ್ ಇದ್ದರು.
Published on
ಗುಂಡ್ಲುಪೇಟೆ: ತಾಲೂಕಿನ ಚಿಕ್ಕತುಪ್ಪೂರು ಸಮೀಪ ಅಪಘಾತದಲ್ಲಿ ಗಾಯಗೊಂಡ ಮಕ್ಕಳ ಆಸ್ಪತ್ರೆಯ ಖರ್ಚು ವೆಚ್ಚ ಭರಿಸುಸುವಂತೆ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹಿಂದೆ ಟಿಪ್ಪರ್‌ಗಳ ಹಾವಳಿ ನಿಯಂತ್ರಿಸಲು ಬಿಗಿಯಾದ ಸೂತ್ರ ಅನುಸರಿಸಲಾಗುತ್ತಿತ್ತು. ಪದೇ ಪದೆ ಸಂಭವಿಸುವ ಅಪಘಾತಗಳಿಂದ ಜನತೆ ರೊಚ್ಚಿಗೆದ್ದಿದ್ದು, ಅದು ವಿಕೋಪಕ್ಕೆ ಹೋಗುವ ಮೊದಲು ಅಧಿಕಾರಿಗಳು ಸಂಘ-ಸಂಸ್ಥೆಗಳವರು ಸೇರಿದಂತೆ ಸಾರ್ವಜನಿಕರ ಸಭೆ ನಡೆಸಿ ಸಲಹೆ -ಸೂಚನೆ ಪಡೆದುಕೊಂಡು ಪಾಲಿಸುವಂತಾಗಬೇಕು. ಶಾಲೆಗೆ ಮಕ್ಕಳು ಹೋಗಿ ಬರುವ ಸಮಯಗಳಲ್ಲಿ ಟಿಪ್ಪರ್ ಸಂಚಾರ ನಿಲ್ಲಿಸಬೇಕು. ಅಕ್ರಮಗಳಲ್ಲಿ ತೊಡಗಿರುವುದು ಕಂಡುಬಂದರೆ ಮುಲಾಜಿಲ್ಲದೆ ಸೀಜ್ ಮಾಡಬೇಕು. ನೆರೆಯ ಕೇರಳಕ್ಕೆ ಭಾರಿ ಪ್ರಮಾಣದಲ್ಲಿ ಕಲ್ಲು ಸಾಗಣೆಯಾಗುತ್ತಿದ್ದು, ಇದರ ಮೇಲೆ ಗಮನಹರಿಸಬೇಕು. ಮಧ್ಯಮವರ್ಗದ ಕುಟುಂಬದಿಂದ ಶಾಲೆಗೆ ಹೋಗುತ್ತಿದ್ದ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಡಿವೈಎಸ್‌ಪಿ ಸ್ನೇಹಾರಾಜ್ ಅವರಿಗೆ ಸೂಚಿಸಿದರು. ಈ ವೆಚ್ಚವನ್ನು ಭರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಎಂ.ಎಸ್.ತನ್ಮಯಿ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ರವಿಕುಮಾರ್, ಗಣಿ ಇಲಾಖೆಯ ಪುಷ್ಪಾ, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ಎನ್.ಮಲ್ಲೇಶ್, ಎಲ್.ಸುರೇಶ್, ಮುಖಂಡ ಡಾ.ನವೀನ್ ಮೌರ್ಯ, ಬಸವರಾಜು, ಪ್ರಣಯ್, ನಾಗೇಂದ್ರ, ಮಂಜುನಾಥ್, ಮಂಜು, ಮಹೇಂದ್ರ, ಸುನಿಲ್ ಮೂಡ್ಲು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net