ನರ್ಸಿಂಗ್ ವೃತ್ತಿ ಪವಿತ್ರವಾದುದು

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಮ್ಸ್ ಕಾಲೇಜ್ ಆಫ್ ನಸಿರ್ಂಗ್ ಎರಡನೇ ಬ್ಯಾಚ್‌ನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಸ್ಪಿ ಎಂ. ಮುತ್ತುರಾಜ್, ಡಾ. ಮಂಜುನಾಥ್ ಇತರರು ಇದ್ದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಮ್ಸ್ ಕಾಲೇಜ್ ಆಫ್ ನಸಿರ್ಂಗ್ ಎರಡನೇ ಬ್ಯಾಚ್‌ನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಸ್ಪಿ ಎಂ. ಮುತ್ತುರಾಜ್, ಡಾ. ಮಂಜುನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Nursing
ಚಾಮರಾಜನಗರ: ನರ್ಸಿಂಗ್ ಬಹಳ ಪವಿತ್ರವಾದ ವೃತ್ತಿಯಾಗಿದ್ದು, ಹಿರಿಯ ನಾಗರಿಕರ ಸೇವೆ ಮತ್ತು ತುರ್ತು ಸಂದರ್ಭದಲ್ಲಿ ಗಾಯಾಳುಗಳಿಗೆ ಶುಶ್ರೂಷಕರು ನೀಡುವ ಸೇವೆ ಅವರ ಜೀವ ಉಳಿಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ತಿಳಿಸಿದರು.
ನಗರದ ಯಡಪುರದ ಬಳಿ ಇರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಿಮ್ಸ್ ಕಾಲೇಜ್ ಆಫ್ ನಸಿರ್ಂಗ್ ಎರಡನೇ ಬ್ಯಾಚ್‌ನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಬಿಎಸ್ಸಿ ನಸಿರ್ಂಗ್ ಪದವಿ ಜತೆಗೆ ಎಂಎಸ್ಸಿ ನಸಿರ್ಂಗ್ ಪದವಿಯನ್ನು ಪಡೆದುಕೊಳ್ಳುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಹಾಗೂ ಸಾಧನೆ ಮಾಡುವ ಸಂಕಲ್ಪ ನಿಮ್ಮದಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಎಂದು ಸಲಹೆ ನೀಡಿದರು.
ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ. ಮಂಜುನಾಥ್ ಮಾತನಾಡಿ, ನಸಿರ್ಂಗ್ ಕ್ಷೇತ್ರದಲ್ಲಿ ಬಹಳ ಬೇಡಿಕೆ ಹಾಗೂ ಹೆಚ್ಚಿನ ಅವಕಾಶಗಳಿವೆ. ವಿದೇಶಗಳಲ್ಲಿಯೂ ನರ್ಸಿಂಗ್ ಸೇವೆಗೆ ಬೇಡಿಕೆ ಇದೆ. ವೃತ್ತಿ ಕೌಶಲ ಪಡೆದು ಆಸ್ಪತ್ರೆಯಲ್ಲಿ ಸೇವೆ ಮಾಡುವಾಗ ರೋಗಿಗಳನ್ನು ಉಪಚಾರಿಸುವ ರೀತಿ ಬಹಳ ಮುಖ್ಯವಾಗಿರುತ್ತದೆ. ನಗು ಮುಖದಿಂದ ರೋಗಿಗಳನ್ನು ಮುಟ್ಟಿ ಮಾತನಾಡಿಸಿದರೆ ಆತ್ಮಸ್ಥೈರ್ಯ ಹೆಚ್ಚಾಗಿ ಶೇ.50 ಕಾಯಿಲೆ ಗುಣವಾಗುವ ಸಾಧ್ಯತೆಗಳು ಇವೆ ಎಂದರು.
ಇದೇ ವೇಳೆ ಬಿಎಸ್ಸಿ ನಸಿರ್ಂಗ್ ಪದವಿ ಪಡೆದುಕೊಂಡಿರುವ 94 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಸರ್ಕಾರಿ ಶುಶ್ರೂಷ ಶಾಲೆಯ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಸಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಅಜಯ್, ಶೂಶ್ರೂಷ ಅಧೀಕ್ಷಕಿ ಜಮುನಾ, ಪ್ರೋ.ರೇವಣ್ಣ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net