ಹನೂರಿನ ಶಾಸಕರ ನಿವಾಸದಲ್ಲಿ ಭಾನುವಾರ ಪದಾಧಿಕಾರಿಗಳು ಭೇಟಿಯಾಗಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ಭೂ ಮಾಪಕರ ಸಂಘದ ಅಧ್ಯಕ್ಷ ಎಚ್.ಎಂ. ಮಹದೇವಸ್ವಾಮಿ ಮಾತನಾಡಿ, ಸರ್ಕಾರಿ ಪರವಾನಗಿ ಭೂ ಮಾಪಕರಾಗಿ ಸುಮಾರು 23 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಇಲಾಖೆಗೆ ಅನುಕೂಲವಾಗುವಂತೆ ಸರ್ಕಾರಿ ಭೂ ಮಾಪಕರು ನಿರ್ವಹಿಸುವ ದರಖಾಸ್ತು, ಪೋಡಿ, ಆಕಾರ ಬಂದ್, ದಾಖಲೆಗಳ ಡಿಜಿಟಲೀಕರಣ, ಹದ್ದುಬಸ್ತು ಅಳತೆ, ಕೋರ್ಟ್ ಅಳತೆ, ಕೆರೆ ಅಳತೆ, ಪೋಡಿ ಮುಕ್ತ ಅಳತೆ, ಪವರ್ ಗ್ರಿಡ್, ಬ್ಯಾಕ್‌ಲಾಗ್ ಪೋಡಿ, ಸ್ವಮಿತ್ವ ಯೋಜನೆ ಸೇರಿದಂತೆ ಇಲಾಖೆಯ ಎಲ್ಲ ಕೆಲಗಳನ್ನು ನಿರ್ವಹಿಸುತ್ತಿದ್ದೇವೆ. ಆದರೆ ಈವರೆಗೂ ಕೆಲಸಕ್ಕೆ ಸೇವಾ ಭದ್ರತೆ ಇಲ್ಲ. ಜತೆಗೆ ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿಲ್ಲ. ಹಾಗಾಗಿ ನಮಗೆ ಒಂದು ಬಾರಿ ವಿಶೇಷ ನೇಮಕಾತಿ ಮಾಡಬೇಕು. ಇಲ್ಲವೇ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.