ಕೊಳ್ಳೇಗಾಲ ಮತ್ತು ಹನೂರು ತಾಲೂಕು ವ್ಯಾಪ್ತಿಯಲ್ಲಿ ಐದು ಹೋಬಳಿಗಳಿದ್ದು, 2025-26 ನೇ ಸಾಲಿನಲ್ಲಿ ಕೊಳ್ಳೇಗಾಲ ಕಸಬಾ ಹೋಬಳಿಯಲ್ಲಿ ಸಾಮಾನ್ಯ 79, ಪ.ಜಾ 29, ಪ.ಪಂ 10 ಸೇರಿದಂತೆ ಒಟ್ಟು 118 ರೈತರಿಗೆ ತುಂತುರು ನೀರಾವರಿ ಸೌಲಭ್ಯವನ್ನು ವಿತರಿಸಲಾಗಿದೆ. ಅಂತೆಯೇ ಪಾಳ್ಯ ಹೋಬಳಿಯಲ್ಲಿ ಸಾಮಾನ್ಯ 121, ಪ.ಜಾ 33, ಪ.ಪಂ 17 ಒಟ್ಟು 171, ಹನೂರು ಹೋಬಳಿಯಲ್ಲಿ ಸಾಮಾನ್ಯ 273, ಪ.ಜಾ 47, ಪ.ಪಂ 28 ಒಟ್ಟು 349, ಲೊಕ್ಕನಹಳ್ಳಿ ಹೋಬಳಿಯಲ್ಲಿ ಸಾಮಾನ್ಯ 399, ಪ.ಜಾ 55, ಪ.ಪಂ 21 ಸೇರಿದಂತೆ ಒಟ್ಟು 475, ರಾಮಪುರ ಹೋಬಳಿಯಲ್ಲಿ ಸಾಮಾನ್ಯ 364, ಪ.ಜಾ 36, ಪ.ಪಂ 7 ಒಟ್ಟು 407 ಜನರಿಗೆ ವಿತರಿಸಲಾಗಿದೆ. ಐದು ಹೋಬಳಿಗಳಿಂದ ಒಟ್ಟಾರೆ ಸಾಮಾನ್ಯ 1,236, ಪ.ಜಾ 200, ಪ.ಪಂ 84 ಒಟ್ಟು ಒಟ್ಟು 1520 ರೈತರಿಗೆ ಸ್ಪ್ರಿಂಕ್ಲರ್ ವಿತರಣೆ ಮಾಡಲಾಗಿದೆ. ಕೃಷಿ ಇಲಾಖೆ ಮಾಹಿತಿಯಂತೆ ಕೊಳ್ಳೇಗಾಲದ ಕಸಬಾ, ಪಾಳ್ಯ ಹೋಬಳಿಗೆ ಕಡಿಮೆ ಪ್ರಮಾಣದಲ್ಲಿ ವಿತರಣೆಯಾಗಿದೆ.