ಚಾಮರಾಜನಗರದ ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಅಡಿಟರ್ ಅಸೋಷಿಯನ್ ಹಾಗೂ ಜಿಲ್ಲಾ ತೆರಿಗೆ ಇಲಾಖೆಯ ಸಹಯೋಗಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ -2025 ರ ಕುರಿತು ಕಾರ್ಯಾಗಾರದಲ್ಲಿ ಉತ್ತಮ ತೆರಿಗೆ ಪಾವತಿದಾರ ಆರ್.ಯೋಗರಾಜ್ ಹಾಗೂ ಹಿರಿಯ ಲೆಕ್ಕ ಪರಿಶೋಧಕ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಆದಾಯ ತೆರಿಗೆ ಅಧಿಕಾರಿ ಗುರುಪ್ರಸಾದ್, ಜಿಲ್ಲಾ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಸಿ.ಎಂ.ವೆಂಕಟೇಶ್, ಚಾರ್ಟರ್ಡ್ ಅಕೌಂಟೆಂಟ್ ಸಂತೋಷ್, ಲೆಕ್ಕ ಪರಿಶೋಧಕರಾದ ಕಮಲ್ ರಾಜ್, ಕಾಮರಾಜ್, ನಾಗಣ್ಣ, ಚಂದ್ರು, ರಂಗನಾಥ್, ಶ್ರೀಧರ್, ಕಾರ್ಯದರ್ಶಿ ಮಂಜು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇಲಾಖೆಯ ಅಧಿಕಾರಿ ಗುರುಪ್ರಸಾದ್ ಸಲಹೆ
ಲೆಕ್ಕಪರಿಶೋಧಕರಿಗೆ ಅರಿವು ಕಾರ್ಯಾಗಾರ
ಚಾಮರಾಜನಗರ: ಆದಾಯ ತೆರಿಗೆ ಕಾಯ್ದೆಯಲ್ಲಿ ಕೆಲವು ಮಾರ್ಪಾಡುಗಳಾಗಿವೆ. ಇವುಗಳ ಬಗ್ಗೆ ಲೆಕ್ಕ ಪರಿಶೋಧಕರು ಇನ್ನೂ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ಆದಾಯ ತೆರಿಗೆ ಅಧಿಕಾರಿ ಗುರುಪ್ರಸಾದ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಆಡಿಟರ್ ಅಸೋಸಿಯೇಷನ್ ಹಾಗೂ ಜಿಲ್ಲಾ ತೆರಿಗೆ ಇಲಾಖೆಯ ಸಹಯೋಗಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ -2025ರ ಕುರಿತ ಕಾರ್ಯಾಗಾರನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆದಾಯ ತೆರಿಗೆ ಕಾಯ್ದೆ 1961ರಲ್ಲಿ ಇದ್ದ 819 ಸೆಕ್ಷನ್‌ಗಳನ್ನು ಪ್ರಸ್ತುತ 536 ಸೆಕ್ಷನ್‌ಗಳಾಗಿ ಮಾರ್ಪಡಿಸಲಾಗಿದೆ. 47 ಅಧ್ಯಾಯಗಳನ್ನು 23 ಅಧ್ಯಾಯಗಳಿಗೆ ಇಳಿಸಲಾಗಿದೆ. ಇದರ ಕುರಿತು ಲೆಕ್ಕ ಪರಿಶೋಧಕರು ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಹೆಚ್ಚಿನ ಮಾಹಿತಿ ಬೇಕಾದರೆ ವಿಶೇಷ ಸಭೆಗಳನ್ನು ಕರೆದು ತಿಳಿಸಿಕೊಡಲಾಗುವುದು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದಾಯ ತೆರಿಗೆ ಕಾಯ್ದೆ-2025 ಅನ್ನು ಏಪ್ರಿಲ್ 1ರಿಂದ ಜಾರಿ ಮಾಡಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಲೆಕ್ಕ ಪರಿಶೋಧಕರು ವೃತ್ತಿ ನೈಪುಣ್ಯತೆಯನ್ನು ಹೊಂದಬೇಕು. ಕಾಯ್ದೆಯ ಮಾಹಿತಿಯನ್ನು ತೆರಿಗೆದಾರರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಿಕೊಡಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಕಾಲಕಾಲಕ್ಕೆ ಆದಾಯ ತೆರಿಗೆ ಕಾಯ್ದೆಯಲ್ಲಿ ಮತ್ತು ಕಾನೂನಿನಲ್ಲಿ ಆಗುವ ಬದಲಾವಣೆ ತಿಳಿದುಕೊಳ್ಳುವ ಅಗತ್ಯವಿದೆ. ಕಾನೂನಿನ ಅರಿವು ಲೆಕ್ಕಪರಿಶೋಧಕರಿಗೆ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ತೆರಿಗೆ ಸಲಹೆಗಾರರು ಗಮನ ಹರಿಸಬೇಕಾಗಿ ಕೋರಿ ಕೊಂಡರು. ತಪ್ಪಿದಿದ್ದರೆ ದಂಡ ಮತ್ತು ಬಡ್ಡಿಯನ್ನು ಕಟ್ಟಬೇಕಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉತ್ತಮ ತೆರಿಗೆ ಪಾವತಿದಾರ ಆರ್.ಯೋಗರಾಜ್ ಹಾಗೂ ಹಿರಿಯ ಲೆಕ್ಕ ಪರಿಶೋಧಕ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸಂತೋಷ್, ಲೆಕ್ಕ ಪರಿಶೋಧಕರಾದ ಕಮಲ್ ರಾಜ್, ಕಾಮರಾಜ್, ನಾಗಣ್ಣ, ಚಂದ್ರು, ರಂಗನಾಥ್, ಶ್ರೀಧರ್, ಕಾರ್ಯದರ್ಶಿ ಮಂಜು, ಮಣಿಕಂಠ ಸ್ವಾಮಿ ಹಾಜರಿದ್ದರು.