ತಾಲೂಕಿನ ಮಧುವನಹಳ್ಳಿ ಗ್ರಾಮದ ಅಡ್ಡಾಳ ಬೀದಿ ನಿವಾಸಿ ರಾಮಕೃಷ್ಣ (50) ಮೃತರು. ಈತನಿಗೆ ಕುಡಿತದ ಚಟವಿತ್ತು. ಮೂರ್ಛೆರೋಗದಿಂದ ಬಳಲುತ್ತಿದ್ದ. ಪ್ರತಿ ನಿತ್ಯ ಮಾತ್ರೆಯನ್ನು ಸೇವಿಸುತ್ತಿದ್ದ. ನ.4 ರಂದು ಕುಡಿದ ಮತ್ತಿನಲ್ಲಿ ನಿತ್ಯದ ಒಂದು ಮಾತ್ರೆ ಸೇವಿಸುವ ಬದಲಿಗೆ 20 ಮಾತ್ರೆ ಸೇವಿಸಿ ಅಸ್ವಸ್ಥನಾಗಿ ಚಾಮರಾಜನಗರ ಸೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದ್ದಾನೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.