ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಶಾಂತಪ್ಪ, ಸೋಮಲಿಂಗಪ್ಪ, ಗೌಡಿಕೆ ರಾಜಶೇಖರ್, ಸೋಮಪ್ಪ, ಪುಟ್ಟಲಿಂಗಯ್ಯ, ಮಹದೇವಶೆಟ್ಟಿ, ಎ.ಎಸ್.ಗುರುಸ್ವಾಮಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • development work
ಚಾಮರಾಜನಗರ: ತಾಲೂಕಿನ ಕೊತ್ತಲವಾಡಿ, ಕಟ್ನವಾಡಿ ಗ್ರಾಮದಲ್ಲಿ 1.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಕಟ್ನವಾಡಿ ಗ್ರಾಮದಲ್ಲಿ ಎಸಿಪಿಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟರ ಬೀದಿಗೆ ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿಗೆ 50 ಲಕ್ಷ ರೂ. ವೆಚ್ಚದ ಕಾಮಗಾರಿ ಹಾಗೂ ವಿಶೇಷ ಅಭಿವೃದ್ಧಿ ಅನುದಾನ ಯೋಜನೆಯಡಿ ಕೊತ್ತಲವಾಡಿ ಗ್ರಾಮದ ಮಾರ್ಗವಾಗಿ ಗೂರುವಿನಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಇದಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಶಾಂತಪ್ಪ, ಮುಖಂಡರಾದ ಸೋಮಲಿಂಗಪ್ಪ, ಗೌಡಿಕೆ ರಾಜಶೇಖರ್, ಸೋಮಪ್ಪ, ಪುಟ್ಟಲಿಂಗಯ್ಯ, ಮಹದೇವಶೆಟ್ಟಿ, ಎ.ಎಸ್.ಗುರುಸ್ವಾಮಿ, ಉಡಿಗಾಲ ನಂಜಪ್ಪ, ನಾಗರಾಜು, ಬಿಸಲವಾಡಿ ರವಿ, ಗುರುಸ್ವಾಮಿ, ಸೋಮಣ್ಣ, ಮಹದೇವ ಪ್ರಸಾದ್, ದೊರೆಸ್ವಾಮಿ, ನಾಗಮಲ್ಲಪ್ಪ, ಶಿವನಂಜಪ್ಪ, ಇಂಜಿನಿಯರ್ ಮಧು ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net