ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಹನೂರು ತಾಲೂಕಿನ ಹುತ್ತೂರು, ಪಿಜಿ ಪಾಳ್ಯ, ಜೋರೆದೊಡ್ಡಿ, ಊಯಿಲನತ್ತ, ಅಜ್ಜಿಪುರ, ದಾಸನದೊಡ್ಡಿ, ದೊಮ್ಮನಗದ್ದೆ, ಎಲ್ಲೇಮಾಳ, ಉಪ್ಪಾರದೊಡ್ಡಿ, ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು. ಬೆಳಿಗ್ಗಿನಿಂದಲೇ ಅಭಾವ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿದರು.