ಜಿನಕನಹಳ್ಳಿ ಸಂಘದಿಂದ ಪಡಿತರ ವಿತರಿಸಲು ಕ್ರಮ

ಕೊಳ್ಳೇಗಾಲ ತಾಲೂಕಿನ ಉಗನಿಯ ಗ್ರಾಮದ ಹೊಸವಾಡಿ ಶ್ರೀ ವೀರಭದ್ರಸ್ವಾಮಿ ದೇವಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜಿನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಅಧ್ಯಕ್ಷ ಮಹದೇವಪ್ಪ ಮಾತನಾಡಿದರು.
ಕೊಳ್ಳೇಗಾಲ ತಾಲೂಕಿನ ಉಗನಿಯ ಗ್ರಾಮದ ಹೊಸವಾಡಿ ಶ್ರೀ ವೀರಭದ್ರಸ್ವಾಮಿ ದೇವಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜಿನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಅಧ್ಯಕ್ಷ ಮಹದೇವಪ್ಪ ಮಾತನಾಡಿದರು.
Published on
ಕೊಳ್ಳೇಗಾಲ: ತಾಲೂಕಿನ ಉಗನಿಯ ಗ್ರಾಮದ ಹೊಸವಾಡಿ ಶ್ರೀ ವೀರಭದ್ರಸ್ವಾಮಿ ದೇವಾಲಯ ಆವರಣದಲ್ಲಿ ಬುಧವಾರ ಜಿನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆ ಆಯೋಜಿಸಲಾಗಿತ್ತು.
ಸಭೆ ಅಧ್ಯಕ್ಷತೆ ವಹಿಸಿದ್ದ ಎಸ್.ಮಹದೇವಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಸೊಸೈಟಿ ವತಿಯಿಂದಲೇ ಪಡಿತರ ಕಾರ್ಡ್‌ದಾರರಿಗೆ ಪಡಿತರವನ್ನು ವಿತರಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ಸಂಘದ ಉಪಾಧ್ಯಕ್ಷ ಎಂ.ಶಿವಮಲ್ಲೇಗೌಡ, ನಿರ್ದೇಶಕರಾದ ಬಿ.ಬಂಗಾರಪ್ಪ, ಎಂ.ಪ್ರಭುಸ್ವಾಮಿ, ಮೋಹನ್ ಕುಮಾರ್, ಕಪನಪ್ಪ, ದೊಡ್ಡಮಾದಪ್ಪ, ಲೋಕೇಶ್, ವೆಂಕಟನಾಯಕ, ವಜ್ರಮಣಿ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕುಮಾರ್, ಕಾರ್ಯದರ್ಶಿ ಪವಿತ್ರಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net