ಯುವ ಕಾಂಗ್ರೆಸ್ ವತಿಯಿಂದ ಶಾಸಕರಿಗೆ ಸನ್ಮಾನ

ಯಳಂದೂರು ಸಮೀಪದ ಸಂತೆಮರಹಳ್ಳಿ ಪ್ರವಾಸಿ ಮಂದಿರದಲ್ಲಿ ಬುಧವಾರ ರಾತ್ರಿ ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಸಣಾಪುರ ವಿಜಯ್ ಅವರು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿದರು.
ಯಳಂದೂರು ಸಮೀಪದ ಸಂತೆಮರಹಳ್ಳಿ ಪ್ರವಾಸಿ ಮಂದಿರದಲ್ಲಿ ಬುಧವಾರ ರಾತ್ರಿ ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಸಣಾಪುರ ವಿಜಯ್ ಅವರು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿದರು.
Published on
ಯಳಂದೂರು: ಇಲ್ಲಿನ ಬ್ಲಾಕ್ ಯುವ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಸಣಾಪುರ ವಿಜಯ್ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಬುಧವಾರ ರಾತ್ರಿ ಸಮೀಪದ ಸಂತೆಮರಹಳ್ಳಿ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ಯುವಕರನ್ನು ಹೆಚ್ಚು ಪಕ್ಷಕ್ಕೆ ಆಕರ್ಷಿಸಲು, ಯುವಕರನ್ನು ಸದಸ್ಯರನ್ನಾಗಿ ಮಾಡಬೇಕು. ಪಕ್ಷದ ಉದ್ದೇಶ, ಇಲ್ಲಿರುವ ತತ್ವ ಸಿದ್ಧಾಂತಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಪಕ್ಷವು ಇದುವರೆವಿಗೆ ಮಾಡಿರುವ ಸಾಧನೆಗಳ ಬಗ್ಗೆ ತಿಳಿ ಹೇಳಬೇಕು. ಗ್ರಾಮೀಣ ಭಾಗಕ್ಕೆ ಪಕ್ಷವು ನೀಡಿರುವ ಕೊಡುಗೆಗಳು, ದೇಶಕ್ಕೆ ಪಕ್ಷ ನೀಡಿರುವ ತ್ಯಾಗ, ಬಲಿದಾನಗಳು, ದೇಶಕ್ಕೆ ಪ್ರಾಣ ತ್ಯಾಗ ಮಾಡಿರುವ ರಾಷ್ಟ್ರೀಯ ನಾಯಕರ ಬಗ್ಗೆ, ಈಗಿನ ಮುಖ್ಯಮಂತ್ರಿ, ಸರ್ಕಾರ ಬಡವರಿಗೆ ಗ್ರಾಮೀಣರಿಗೆ ನೀಡಿರುವ ಸೌಲಭ್ಯಗಳು, ಇದರಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಬೇಕು. ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ, ಈಗ ಆಗುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮನನ ಮಾಡಿಕೊಡಬೇಕು ಎಂದರು.
ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಶಿವನಂಜಯ್ಯ, ಆಲ್ಕರೆ ಅಗ್ರಹಾರ ರೇವಣ್ಣ, ಪ್ರದೀಪ್, ವಿನೋದ್, ಸಚಿನ್ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net