ಕೊಳ್ಳೇಗಾಲ ಪಟ್ಟಣದ ನ್ಯಾಯಾಲಯ ಎದುರು ವಕೀಲರು ಧರಣಿ ನಡೆಸಿದರು.
Published on:
Copied
Follow Us
ಕೊಳ್ಳೇಗಾಲ: ಪಟ್ಟಣದ ನ್ಯಾಯಾಲಯ ಮುಂಭಾಗ ಗುರುವಾರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಕೀಲರು ಧರಣಿ ನಡೆಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ಸಭೆ ನಡೆಸಿದ ನಂತರ ಧರಣಿ ಆರಂಭಿಸಿದರು. ಕೊಳ್ಳೇಗಾಲದ ಹಳೆಯ ನ್ಯಾಯಾಲಯದ ಕಟ್ಟಡದಲ್ಲಿ ವಕೀಲರಿಗೆ ಸುಸಜ್ಜಿತ ಶೌಚಗೃಹವಿಲ್ಲ. ಮಹಿಳಾ ವಕೀಲರಿಗೆ ವಿಶ್ರಾಂತಿ ಕೊಠಡಿ ಇಲ್ಲ. ಕಟ್ಟಡದ ಛಾವಣಿಗೆ ತಗಡಿನ ಶೀಟು ಅಳವಡಿಸಿದ್ದು ನ್ಯಾಯಾಲಯದ ಹಾಲ್‌ನಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ. ವಕೀಲರ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲ. ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸಮರ್ಪಕ ಸ್ಥಳವಿಲ್ಲದಾಗಿದೆ. ಕೂಡಲೇ ಮೂಲಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದುರ.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಬಸವರಾಜು, ಕಾರ್ಯದರ್ಶಿ ಡಿ.ಕೆಂಪಯ್ಯ, ಉಪಾಧ್ಯಕ್ಷ ಸೀಮಾ ತಹಸೀನ್ ಸುಲ್ತಾನ, ಹಿರಿಯ ವಕೀಲ ಪಿ.ಮಹದೇವು, ಶ್ರೀರಾಮಲು, ಮಲ್ಲಿಕಾರ್ಜುನಸ್ವಾಮಿ, ರಾಜೇಂದ್ರ, ಅಮೃತ್ ರಾಜ್, ಬಸವಣ್ಣ, ಆರಾಧ್ಯ, ಸೆಲ್ವರಾಜು, ನಟರಾಜು, ರಾಜು, ರಾಮಕೃಷ್ಣ, ಅಶೋಕ ಇದ್ದರು.