ಕಾರ್ಮಿಕ ಇಲಾಖೆ ಕಚೇರಿ ಕಟ್ಟಡ ಕಾಮಗಾರಿ ಶುರು

ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಭೂಮಿಪೂಜೆ
ಚಾಮರಾಜನಗರ
ಚಾಮರಾಜನಗರದಲ್ಲಿ ಕಾರ್ಮಿಕ ಇಲಾಖೆ ನೂತನ ಕಚೇರಿ ಕಟ್ಟಡ ಕಾಮಗಾರಿಗೆ ಸಚಿವ ಸಿ. ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಮಹಮ್ಮದ್ ಅಸ್ಗರ್, ರಾಜಪ್ಪ, ಯೋಗೇಂದ್ರ, ದೇವರಾಜು, ಸ್ವಾಮಿ, ಸಿದ್ದಪ್ಪ ಇತರರು ಇದ್ದರು. ಚಾಮರಾಜನಗರ
Published on: 

ಚಾಮರಾಜನಗರ: ನಗರಸಭೆ ವ್ಯಾಪ್ತಿಯ 10ನೇ ವಾರ್ಡ್‌ನ ಕರಿನಂಜನಪುರ ಬಡಾವಣೆಯಿಂದ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 3.05 ಕೋಟಿ ರೂ.ವೆಚ್ಚದಲ್ಲಿ ನಿಮಾಣ ಮಾಡಲು ಉದ್ದೇಶಿಸಿರುವ ಕಾರ್ಮಿಕ ಇಲಾಖೆ ನೂತನ ಕಚೇರಿ ಕಟ್ಟಡ ಕಾಮಗಾರಿಗೆ ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ನೂತನ ಕಟ್ಟಡದಲ್ಲಿ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಕೋರ್ಟ್ ಹಾಲ್, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಚೇರಿ ನಿರ್ಮಿಸಲಾಗುವುದು. ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ನಗರಸಭೆ ಮಾಜಿ ಉಪಾಧ್ಯಕ್ಷ ರಾಜಪ್ಪ, ಯೋಗೇಂದ್ರ, ದೇವರಾಜು, ಸ್ವಾಮಿ, ಎಇಇ ಸಿದ್ದಪ್ಪ ಇತರರು ಇದ್ದರು.