ಶ್ರೀವಾಸವಿ ವಿದ್ಯಾಕೇಂದ್ರದ ಮಕ್ಕಳಿಂದ ಶ್ರಮದಾನ

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಇ ವಿಭಾಗದ ವಿದ್ಯಾರ್ಥಿಗಳು ಪಟ್ಟಣದ ಮರಡಿಗುಡ್ಡ (ವೃಕ್ಷವನ)ದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಇ ವಿಭಾಗದ ವಿದ್ಯಾರ್ಥಿಗಳು ಪಟ್ಟಣದ ಮರಡಿಗುಡ್ಡ (ವೃಕ್ಷವನ)ದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
Published on
ಕೊಳ್ಳೇಗಾಲ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶ್ರೀವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಇ ವಿಭಾಗದ ವಿದ್ಯಾರ್ಥಿಗಳು ಪಟ್ಟಣದ ಮರಡಿಗುಡ್ಡ (ವೃಕ್ಷವನ)ದಲ್ಲಿ ಶ್ರಮದಾನ ಮಾಡಿದರು.
ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ವಲಯ ಸೂಚನಾ ಫಲಕ ಅಳವಡಿಸಿ, ಸ್ವಚ್ಛತೆ ಮಾಡಿ, ಗಿಡಗಳನ್ನು ನೆಟ್ಟು ನೀರೆರೆದು ಪರಿಸರ ದಿನ ಆಚರಿಸಿದರು.
ಬಳಿಕ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ಎ.ಡಿ.ಕುಮಾರ ಕೃಷ್ಣ ಮಾತನಾಡಿ, ಪರಿಸರವನ್ನು ಪ್ರೀತಿಸಿ, ಉಳಿಸಿ, ಬೆಳೆಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ವಿವಿಧ ವೇಷ ಭೂಷಣ ಧರಿಸಿದ್ದರು, ನಾಟಕಾಭಿನಯ, ನೃತ್ಯ, ಹಾಡುಗಳನ್ನು ಹೇಳುವುದರ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಬಳಿಕ ಪರಿಸರ ಜಾಗೃತಿ ನಾಮಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಈ ವೇಳೆ ಹಲವು ವಿದ್ಯಾರ್ಥಿಗಳು ಸೈಕಲ್ ಜಾಥಾ ಮಾಡಿದರು.
ಸಿಬಿಎಸ್‌ಇ ವಿಭಾಗದ ನಿರ್ದೇಶಕ ಡಾ.ಆಶಿಕ್ ವಿ.ಓಲೈಟಿ, ಪಿಯು ಕಾಲೇಜಿನ ಪ್ರಾಂಶುಪಾಲೆ ವಾಸವಾಂಬ, ಶ್ರೀವಾಸವಿ ಪ್ರೌಢಶಾಲೆಯ ( ರಾಜ್ಯ ಪಠ್ಯಕ್ರಮ) ಮುಖ್ಯಶಿಕ್ಷಕಿ ಗೀತಾ, ಸಿಬಿಎಸ್‌ಇ ಪ್ರಾಂಶುಪಾಲ ಡಾ.ಎಸ್.ದಯಾಪ್ರಸಾದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net