ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿರುವ ಒಕ್ಕಲಿಗರ ಸಂಘದ ಕಚೇರಿ ಮುಂಭಾಗ ಬುಧವಾರ ನಗರ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸಂಭ್ರ ಮಾಚರಣೆ ನಡೆಸಿದರು.
Published on:
Copied
Follow Us
ಕೊಳ್ಳೇಗಾಲ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ನಗರದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸಂಭ್ರಮಾಚರಣೆ ನಡೆಸಿದರು.
ಪಟ್ಟಣದ ಒಕ್ಕಲಿಗರ ಸಂಘದ ಕಚೇರಿಯ ಮುಂಭಾಗ ಜಮಾಯಿಸಿದ ಒಕ್ಕಲಿಗ ಸಂಘದ ಪದಾಧಿಕಾರಿಗಳು ಜೈಕಾರ ಕೂಗಿ, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಶೇಖರ್, ಉಪಾಧ್ಯಕ್ಷ ಮಹೇಶ್, ಕೆ.ಪಿ.ಪ್ರಕಾಶ್, ಕಾರ್ಯದರ್ಶಿ ಬಾಲಕೃಷ್ಣೇಗೌಡ, ಪ್ರೊ. ದೊಡ್ಡಲಿಂಗೇಗೌಡ, ಬಾಲಕೃಷ್ಣೇಗೌಡ, ಕೆ.ಕೆಂಪಣ್ಣ, ಸಿದ್ದಲಿ ಂಗೇಗೌಡ, ಸೋಮಣ್ಣ, ರವೀಂದ್ರ, ಚಿಕ್ಕಮರಿಗೌಡ, ಕೃಷ್ಣ, ಆರ್.ಕೃಷ್ಣೇಗೌಡ, ರಮೇಶ್ ಇತರರಿದ್ದರು.