ಕೊಳ್ಳೇಗಾಲ: ತಾಲೂಕಿನ ಕಾಮಗೆರೆ ಗ್ರಾಮದ ಒಕ್ಕಲಿಗರ ಬಡಾವಣೆಯ 3 ನೇ ಕ್ರಾಸ್‌ನಲ್ಲಿ ಶುಕ್ರವಾರ ಕೆಂಪೇಗೌಡರ ಭಾವಚಿತ್ರವಿರುವ ಫಲಕವನ್ನು ಅನಾವರಣ ಗೊಳಿಸಲಾಯಿತು.
ಒಕ್ಕಲಿಗರ ಬಡಾವಣೆಯ ಮುಖಂಡರಾದ ಗೋವಿಂದೇಗೌಡ ಮತ್ತು ಕುಮಾರ್‌ಗೌಡ ಅವರು ಫಲಕವನ್ನು ಅನಾವರಣಗೊಳಿಸಿದರು. ಈ ವೇಳೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮುಖಂಡ ಗೋವಿಂದೇಗೌಡ ಬಡವರಿಗೆ 100 ಬೆಡ್‌ಶೀಟ್ ವಿತರಣೆ ಮಾಡಿದರು. ಕೆಂಪೇಗೌಡರ ಸಂಘದ ವತಿಯಿಂದ ಮರಿಗೌಡ ಮಾದೇವಗೌಡ, ಸತ್ಯಾನಂದ, ಮೊಬೈಲ್ ನಾಗೇಂದ್ರ, ಶಿಕಾರಿಗೌಡ ಅವರನ್ನು ಸನ್ಮಾನಿಸಲಾಯಿತು.