ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಕೈವಲ್ಯ ಸಾಹಿತ್ಯ ಸೇರಲಿ

ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಬೆಟ್ಟದ ಶ್ರೀ ಶಂಭುಲಿಂಗ ಕ್ಷೇತ್ರದಲ್ಲಿ ಭಾನುವಾರ ನಿಜಗುಣ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ನಿಜಗುಣ ಕುಮಾರಸ್ವಾಮಿಗಳ ಸಂಸ್ಮರಣೆ ಹಾಗೂ ‘ಸ್ತೋತ್ರಮಾಲೆ’ ಕೃತಿ ಬಿಡುಗಡೆ ಮಾಡಲಾಯಿತು. ಶ್ರೀ ಬಾಲ ಷಡಕ್ಷರ ಸ್ವಾಮೀಜಿ, ಶ್ರೀ ಬಾಲಷಡಕ್ಷರ ಸ್ವಾಮೀಜಿ, ಕೃಷ್ಣಮೂರ್ತಿ, ಅಂಶಿ ಪ್ರಸನ್ನ ಕುಮಾರ್, ಹೆಳವರಹುಂಡಿ ಸಿದ್ದಪ್ಪ ಇತರರು ಇದ್ದರು.
ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಬೆಟ್ಟದ ಶ್ರೀ ಶಂಭುಲಿಂಗ ಕ್ಷೇತ್ರದಲ್ಲಿ ಭಾನುವಾರ ನಿಜಗುಣ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ನಿಜಗುಣ ಕುಮಾರಸ್ವಾಮಿಗಳ ಸಂಸ್ಮರಣೆ ಹಾಗೂ ‘ಸ್ತೋತ್ರಮಾಲೆ’ ಕೃತಿ ಬಿಡುಗಡೆ ಮಾಡಲಾಯಿತು. ಶ್ರೀ ಬಾಲ ಷಡಕ್ಷರ ಸ್ವಾಮೀಜಿ, ಶ್ರೀ ಬಾಲಷಡಕ್ಷರ ಸ್ವಾಮೀಜಿ, ಕೃಷ್ಣಮೂರ್ತಿ, ಅಂಶಿ ಪ್ರಸನ್ನ ಕುಮಾರ್, ಹೆಳವರಹುಂಡಿ ಸಿದ್ದಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಆಗ್ರಹ
  • ಶ್ರೀ ನಿಜಗುಣ ಕುಮಾರಸ್ವಾಮಿಗಳ ಸಂಸ್ಮರಣೆ, ಸ್ತೋತ್ರಮಾಲೆ ಕೃತಿ ಬಿಡುಗಡೆ

ಕೊಳ್ಳೇಗಾಲ:

ಕೈವಲ್ಯ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಸೇರಿಸಬೇಕು ಎಂದು ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಒತ್ತಾಯಿಸಿದರು.

ತಾಲೂಕಿನ ಚಿಲಕವಾಡಿ ಬೆಟ್ಟದ ಶ್ರೀ ಶಂಭುಲಿಂಗ ಕ್ಷೇತ್ರದಲ್ಲಿ ಭಾನುವಾರ ನಿಜಗುಣ ಫೌಂಡೇಷನ್ ಆಯೋಜಿಸಿದ್ದ ಶ್ರೀ ನಿಜಗುಣ ಕುಮಾರಸ್ವಾಮಿಗಳ ಸಂಸ್ಮರಣೆ ಹಾಗೂ ‘ಸ್ತೋತ್ರಮಾಲೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಕ್ತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಕುಮಾರ ನಿಜಗುಣ ಸ್ವಾಮೀಜಿ ಅವರು ಅಪಾರ ಸಾಧನೆ ಮಾಡಿದ್ದಾರೆ. ಛಂದಸ್ಸಿನಲ್ಲಿ ಸಾಹಿತ್ಯ ರಚಿಸಿ ದ್ದಾರೆ. ಆ ಮೂಲಕ ಹಳಗನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಇಷ್ಟಾದರೂ ಅವರಿಗೆ ಸಿಗಬೇಕಾದ ಗೌರವ ಶೈಕ್ಷಣಿಕ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಿಗಲಿಲ್ಲ ಎಂದು ವಿಷಾದಿಸಿದರು.
ಅವರ ಭಕ್ತಿಗೀತೆಗಳನ್ನು ಭಜನಾ ರೂಪದಲ್ಲಿ ಹಾಡಲಾಗುತ್ತದೆ. ನಿಜಗುಣರು ಮೊದಲು ರಾಜಕಾರಣದಲ್ಲಿದ್ದು, ನಂತರ ವಕೀಲ ರಾಗಿದ್ದರು. ಈ ರೀತಿ ಲೌಕಿಕ ಬದುಕಿನಲ್ಲಿದ್ದವರು ನಂತರ ಚಿಲಕವಾಡಿ ಬೆಟ್ಟಕ್ಕೆ ಬಂದು ತಪಸ್ಸು ಮಾಡಿ, ಸಾಧನೆ ಮಾಡಿದ್ದಾರೆ. ಅವರೊಂದು ರೀತಿಯಲ್ಲಿ ಹಠಯೋಗಿ, ಹಠ ಸಾಧಕರು. ಅವರು ಕೈವಲ್ಯ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ವಿಶಿಷ್ಟ ಹಾಗೂ ವಿಭಿನ್ನವಾದುದು. ಇದೇ ಒಂದು ತತ್ವಶಾಸ್ತ್ರವಾಗಬೇಕಿತ್ತು. ಇಂಥ ಗಟ್ಟಿ ಸಾಹಿತ್ಯಕ್ಕೆ ಮಾನ್ಯತೆ ಸಿಕ್ಕಿಲ್ಲ. ಮುಂದಾದರೂ ವಿವಿಗಳು ಕೈವಲ್ಯ ಸಾಹಿತ್ಯವನ್ನು ಪಠ್ಯಕ್ಕೆ ಸೇರಿಸುವ ಕೆಲಸ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಕುಂದೂರು ಮಠದ ಶ್ರೀ ಶರತ್ಚಂದ್ರ ಸ್ವಾಮೀಜಿ ಮಾತನಾಡಿ, ಜೈನ ಸಾಹಿತ್ಯದಲ್ಲಿ ಕೇವಲ ಎಂಬ ಪದದ ಪ್ರಸ್ತಾಪ ಬರುತ್ತದೆ. ಕೇವಲ ಎಂದರೇ ಶೂನ್ಯ, ಕೇವಲಿ ಎಂದರೇ ಜ್ಞಾನಿ. ಕೈವಲ್ಯ ಸಾಹಿತ್ಯದ ಅಧ್ಯಾತ್ಮದ ಮಾರ್ಗ ತೋರಿಸುತ್ತದೆ ಎಂದರು.
ಮುಂದೆ ಬಸವ ಕಲ್ಯಾಣದಲ್ಲಿ ವಚನ ವಿವಿ ಆರಂಭವಾಗಲಿದ್ದು, ಅಲ್ಲಿ ಕೈವಲ್ಯ ಸಾಹಿತ್ಯ ಪೀಠ ಆರಂಭಿಸಲು ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.
‘ಸ್ತೋತ್ರಮಾಲೆ’ ಕೃತಿ ಪ್ರಕಟಣೆಗೆ ನೆರವಾದ ಹರ್ಷ, ಚಾಮರಾಜನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಚ್.ಎಂ.ಬಸವರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
ಚಿಲಕವಾಡಿ ಬೆಟ್ಟ ವಿರಕ್ತ ಮಠದ ಶ್ರೀ ಬಾಲಷಡಕ್ಷರ ಸ್ವಾಮೀಜಿ, ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಡಾ.ಪಿ. ಶಿವರಾಜು, ನಿವೃತ್ತ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ, ವರಕೋಡು ಪಿಯು ಕಾಲೇಜು ಪ್ರಾಂಶುಪಾಲ ದೇವರಾಜು ಪಿ.ಚಿಕ್ಕಹಳ್ಳಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಿವೃತ್ತ ಡಿವೈಎಸ್ಪಿ ಹೊರೆಯಾಲ ಶಿವಬಸಪ್ಪ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಡಾ.ಲೋಕೇಶ್, ಸಾಹಿತಿ ಇಂದುವಾಡಿ ಶಿವಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net