ಮಲೆಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿನ ಈ ಶಾಲೆಯಲ್ಲಿ 5ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಸಮೀಪದಲ್ಲಿಯೇ ಅರಣ್ಯ ಪ್ರದೇಶವಿರುವುದರಿಂದ ಕಳೆದ ವರ್ಷ ಕಾಡಾನೆಯೊಂದು ಶಾಲೆಗೆ ಲಗ್ಗೆ ಇಟ್ಟು ಗೇಟ್ ಹಾಗೂ ಕಾಂಪೌಂಡ್‌ಗೆ ಹಾನಿ ಮಾಡಿತ್ತು. ಜತೆಗೆ ಕಳೆದ 2 ತಿಂಗಳ ಹಿಂದೆಯೂ ಕಾಂಪೌಂಡ್ ಹಾಗೂ ನೀರಿನ ಪರಿಕರ ಹಾನಿಗೊಳಗಾಗಿ ಗ್ರಾಪಂ ವತಿಯಿಂದ ರಿಪೇರಿ ಮಾಡಲಾಗಿತ್ತು. ಇದೀಗ ಕಾಡಾನೆ ಮತ್ತೆ ದಾಳಿ ನಡೆಸಿದ್ದು, ಗೇಟ್ ಮುರಿದು ಶಾಲಾವರಣಕ್ಕೆ ಪ್ರವೇಶಿಸಿ ದಾಂಧಲೆ ನಡೆಸಿದೆ. ಅದೃಷ್ಟವಶಾತ್ ರಾತ್ರಿ ವೇಳೆಯಾದ್ದರಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.