ಬಾವಿಗೆ ಬಿದ್ದಿದ್ದ ಹಸು ರಕ್ಷಣೆ

ಚಿಂಚಳ್ಳಿಯಲ್ಲಿ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿ ರಕ್ಷಿಸಿದರು.
ಚಿಂಚಳ್ಳಿಯಲ್ಲಿ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿ ರಕ್ಷಿಸಿದರು.
Published on
ಹನೂರು: ತಾಲೂಕಿನ ಚಿಂಚಳ್ಳಿ ಗ್ರಾಮದ ಜಮೀನಲ್ಲಿ ಶನಿವಾರ ಸಂಜೆ ಬಾವಿಗೆ ಬಿದ್ದಿದ್ದ ಇಲಾಯಿತಿ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಸುರಕ್ಷಿತವಾಗಿ ಮೇಲೆತ್ತಿದರು.
ಸಂಜೆ ಮೇಯುತ್ತಿದ್ದ ಇಲಾಯಿತಿ ಹಸು ಗ್ರಾಮದ ಜಗದೀಶ್ ಅವರ ಬಾವಿಗೆ ಆಯತಪ್ಪಿ ಬಿದ್ದಿದೆ. ಇದನ್ನು ಕಂಡ ಜಗದೀಶ್ ಅವರು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದರು.
ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಸುವನ್ನು ರಕ್ಷಿಸಿ ವಾರಸುದಾರರಿಗೆ ಒಪ್ಪಿಸಿದರು.
ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ರವೀಂದ್ರ, ಸಿಬ್ಬಂದಿ ಆನಂದ್, ಜಯಪ್ರಕಾಶ್, ಲಿಂಗೇಶ್ ಹಾಗೂ ಅನಿಲ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net