ಅಹೋರಾತ್ರಿ ಧರಣಿಗೆ ಧರ್ಮಗುರುಗಳ ಬೆಂಬಲ

ವಡಕೆಹಳ್ಳದಲ್ಲಿ ಆರಂಭಿಸಿರುವ ಅಹೋರಾತ್ರಿ ಧರಣಿಗೆ ಚರ್ಚ್ ಧರ್ಮಗುರುಗಳಾದ ಜೋಸೆಫ್ ಪೌಲ್‌ರಾಜ್, ಸ್ಟೀಪನ್ ಬೆಂಬಲ ಸೂಚಿಸಿದರು. ಅರ್ಪುದರಾಜ್, ಲೂರ್ದುಸ್ವಾಮಿ, ಕೊಳಂದೈ ತೆರೆಸಾ, ಚಿನ್ನಾತ್ತಳ್ ಇದ್ದರು.
ವಡಕೆಹಳ್ಳದಲ್ಲಿ ಆರಂಭಿಸಿರುವ ಅಹೋರಾತ್ರಿ ಧರಣಿಗೆ ಚರ್ಚ್ ಧರ್ಮಗುರುಗಳಾದ ಜೋಸೆಫ್ ಪೌಲ್‌ರಾಜ್, ಸ್ಟೀಪನ್ ಬೆಂಬಲ ಸೂಚಿಸಿದರು. ಅರ್ಪುದರಾಜ್, ಲೂರ್ದುಸ್ವಾಮಿ, ಕೊಳಂದೈ ತೆರೆಸಾ, ಚಿನ್ನಾತ್ತಳ್ ಇದ್ದರು.
Published on
ಹನೂರು: ಏತ ನೀರಾವರಿ ಯೋಜನೆ ರೂಪಿಸುವಂತೆ ಆಗ್ರಹಿಸಿ ತಾಲೂಕಿನ ವಡಕೆಹಳ್ಳದಲ್ಲಿ ರೈತರು ಆರಂಭಿಸಿರುವ ಅಹೋರಾತ್ರಿ ಧರಣಿ 12ನೇ ದಿನವಾದ ಶುಕ್ರವಾರವೂ ಮುಂದುವರಿಯಿತು. ಚರ್ಚ್ ಧರ್ಮಗುರುಗಳು ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ರೈತ ಸಂಘದ ದಂಟಳ್ಳಿ ಏತ ನೀರಾವರಿ ಸಮಿತಿ ವತಿಯಿಂದ ಕಳೆದ 11 ದಿನಗಳಿಂದಲೂ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಇತರೆ ರೈತ ಸಂಘಟನೆ, ಕ್ರಿಶ್ಚಿಯನ್ ಸಮುದಾಯ, ಮಹಿಳೋದಯ ಮಹಿಳಾ ಒಕ್ಕೂಟ ಹಾಗೂ ಚರ್ಚ್ ಫಾದರ್‌ಗಳು ಬೆಂಬಲ ನೀಡುತ್ತಾ ಬಂದಿದ್ದಾರೆ. ಏತ ನೀರಾವರಿಯನ್ನು ರೂಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಹಾಗೂ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟವನ್ನು ಸುಧಾರಿಸುವುದರ ಮೂಲಕ ತಲೆದೋರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬೇಕು ಎನ್ನುವುದು ರೈತರ ಪ್ರಮುಖ ಒತ್ತಾಯ. ಸರ್ಕಾರದ ನಡೆ ಖಂಡಿಸಿ ದಿನದಿಂದ ದಿನಕ್ಕೆ  ಧರಣಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
ಶುಕ್ರವಾರ ವಡ್ಡರದೊಡ್ಡಿ ಚರ್ಚ್ ಧರ್ಮಗುರು ಫಾದರ್ ಜೋಸೆಫ್ ಪೌಲ್‌ರಾಜ್, ವಡಕೆಹಳ್ಳದ ಫಾದರ್ ಸ್ಟೀಪನ್ ಅವರು ಭಾಗವಹಿಸಿ ಧರಣಿಗೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಮಾರ್ಟಳ್ಳಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಕಾರ್ಯದರ್ಶಿ ಲೂರ್ದುಸ್ವಾಮಿ, ಮಾಜಿ ಸೈನಿಕ ಜೋಸೆಫ್, ರೈತ ಮುಖಂಡರಾದ ದಿವ್ಯಾನಂದ, ಅಂತೋಣಿಸ್ವಾಮಿ, ಶಿವಣ್ಣ, ಕೊಳಂದೈ ತೆರೆಸಾ, ಚಿನ್ನಾತ್ತಳ್, ಸಗಾಯಮೇರಿ, ಪೆರಿಯ ನಾಯಗಮ್ಮಾಳ್ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net