ತಾಯಿ ಹುಲಿ ಜತೆ 3 ಮರಿ ಹುಲಿಗಳ ದರ್ಶನ

ಅಜ್ಜೀಪುರ ಸಫಾರಿಯಲ್ಲಿ ಮರಿ ಹುಲಿಯೊಂದಿಗೆ ದರ್ಶನ ನೀಡಿದ ತಾಯಿ ಹುಲಿ.
ಅಜ್ಜೀಪುರ ಸಫಾರಿಯಲ್ಲಿ ಮರಿ ಹುಲಿಯೊಂದಿಗೆ ದರ್ಶನ ನೀಡಿದ ತಾಯಿ ಹುಲಿ.
Published on
ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದ ಅಜ್ಜೀಪುರ ಸಫಾರಿಯಲ್ಲಿ ಬುಧವಾರ ತಾಯಿ ಹುಲಿ ಜತೆ 3 ಮರಿ ಹುಲಿಗಳು ದರ್ಶನ ನೀಡಿದೆ.
ಅಜ್ಜೀಪುರದ ಮೂಲಕ ತೆರಳುವ ಈ ಸಫಾರಿಯ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಈವರೆಗೂ ಒಂಟಿ ಹುಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಬುಧವಾರ ಪ್ರವಾಸಿಗರಿಗೆ ಗಣಿಗಲೆ ಮರದ ಸಮೀಪ ವಿಶ್ರಾಂತಿ ಪಡೆಯುತ್ತಿದ್ದ ತಾಯಿ ಹುಲಿ ಜತೆ 3 ಮರಿ ಹುಲಿಗಳು ಕಾಣಿಸಿಕೊಂಡಿರುವುದು ಸಂತಸ ಉಂಟು ಮಾಡಿದೆ.
ಪ್ರವಾಸಿಗರ ವಾಹನ ಸಮೀಪಿಸುತ್ತಿದ್ದಂತೆ ಜತೆಯಲ್ಲಿದ್ದ 2 ಮರಿ ಹುಲಿಗಳು ಮರೆಯಾಗಿದ್ದು, ಒಂದು ಮರಿ ಹುಲಿ ಮಾತ್ರ ತಾಯಿಯೊಂದಿಗೆ ಸರಸವಾಡುತ್ತಿತ್ತು. ಈ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net