ಪಟ್ಟಣ ವ್ಯಾಪ್ತಿಯಲ್ಲಿ ಈಜುಕೊಳ, ಆಧುನಿಕ ಜಿಮ್, ಖಾಸಗಿ ಬಸ್ ನಿಲ್ದಾಣ, ಪ್ರವಾಸಿ ತಾಣಗಳನ್ನು ಗುರುತಿಸಲು ಡಿಜಿಟಲ್ ಟೂರಿಸಂ ಇನ್‌ಫಾರ್ಮೆಷನ್ ಬೋರ್ಡ್ ನಿರ್ಮಾಣ, ಊಟಿ-ಮೈಸೂರು ರಸ್ತೆಯಲ್ಲಿ ಫುಟ್‌ಪಾತ್ ಮತ್ತು ರ‌್ಯಾಲಿಂಗ್ಸ್ ಮುಂದುವರಿದ ಕಾಮಗಾರಿ, ಮುಖ್ಯ ರಸ್ತೆಗಳ ಅಭಿವೃದ್ಧಿ, ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸೋಲಾರ್ ಪ್ಲಾಂಟ್, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಪುರಸಭೆ ಅಧಿಕಾರಿ, ನೌಕರರ ವಸತಿಗೃಹ ನಿರ್ಮಾಣ, ಆಟೋ ಟ್ಯಾಕ್ಸಿ ಪಾರ್ಕಿಂಗ್ ನಿರ್ಮಾಣ, ಶ್ರೀರಾಮ ದೇವರ ಗುಡ್ಡದ ಬಳಿ ಆಶ್ರಯ ಯೋಜನೆ ಬಡಾವಣೆಗೆ ಮೂಲಸೌಲಭ್ಯ, ಚಿಕ್ಕತುಪ್ಪೂರು ಗ್ರಾಮದ ಬಳಿ ಹೊಸ ಬಡಾವಣೆಗೆ ಮೂಲಸೌಲಭ್ಯ, ಹೊಸ ಬಡಾವಣೆ ಸಿಎ ನಿವೇಶನಗಳಲ್ಲಿ ಹಣ್ಣು, ತರಕಾರಿ ಮಾರುಕಟ್ಟೆ ನಿರ್ಮಾಣ, ಕಸಾಯಿಖಾನೆಗೆ ಆಧುನಿಕ ಸಾಮಗ್ರಿಗಳ ಅಳವಡಿಕೆ ಮತ್ತು ಉನ್ನತೀಕರಣ ಸೇರಿ ಒಟ್ಟು 37.40 ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆಗಳ ಅನುಷ್ಠಾನ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.