ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕೃಷಿ ವಿಜ್ಞಾನಿಗಳು ರೈತರಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡಿದರು. ಪಂಪನಗೌಡ, ಹನುಮಂತಪ್ಪ, ಮಧು, ದಿಲೀಪ್ ಇದ್ದರು.
Published on:
Copied
Follow Us
ಗುಂಡ್ಲುಪೇಟೆ:ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತಾಲೂಕಿನ ಹಂಗಳ ಗ್ರಾಮದಲ್ಲಿ ‘ತೋಟಗಾರಿಕೆ ಬೆಳೆಗಳಲ್ಲಿ ರಸಗೊಬ್ಬರಗಳ ಸಮತೋಲನ ಬಳಕೆ’ ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪಂಪನಗೌಡ ಹಾಗೂ ಮಣ್ಣು ವಿಜ್ಞಾನಿ ಹನುಮಂತಪ್ಪ ಮೇಟಿ ಅವರು ಭಾಗವಹಿಸಿ, ಮಣ್ಣು ಪರೀಕ್ಷೆ ಆಧಾರಿತವಾಗಿ ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಸಮತೋಲನವಾಗಿ ಬಳಸುವುದರಿಂದ ಇಳುವರಿ ಹಾಗೂ ಗುಣಮಟ್ಟ ಹೆಚ್ಚಳದ ಜತೆಗೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಅತಿಯಾದ ರಸಗೊಬ್ಬರ ಬಳಕೆ ತಪ್ಪಿಸಿ ಸಾವಯವ, ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳನ್ನು ಸಮನ್ವಯಗೊಳಿಸಲು ಸಲಹೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಟೊಮ್ಯಾಟೊ, ಮೆಣಸಿನಕಾಯಿ, ಬಾಳೆ ಮುಂತಾದ ಬೆಳೆಗಳಲ್ಲಿ ಕಂಡುಬರುವ ಎಲೆಚುಕ್ಕಿ ರೋಗ, ನಂಜುರೋಗ, ಕಾಯಿ ಕೊರಕ, ಥ್ರಿಪ್ಸ್ ಹಾಗೂ ಹೇನು ಕೀಟಗಳ ಸಮಗ್ರ ನಿರ್ವಹಣೆ ಕುರಿತು ಚರ್ಚಿಸಿದರು.
ರೋಗರಹಿತ ಸಸಿಗಳ ಬಳಕೆ, ಬೆಳೆ ಪರಿವರ್ತನೆ, ಜೈವಿಕ ನಿಯಂತ್ರಕಗಳಾದ ಟ್ರೈಕೋಡರ್ಮಾ, ಸೂಡೋಮೋನಾಸ್, ಬೇವಿನಾಧಾರಿತ ಕೀಟನಾಶಕಗಳ ಬಳಕೆ ಹಾಗೂ ಹಳದಿ ಅಂಟು ಬಲೆ, ಫೆರೋಮೋನ್ ಬಲೆಗಳ ಅಳವಡಿಕೆ ಬಗ್ಗೆ ಮಾಹಿತಿ ನೀಡಿ ಸ್ಥಳದಲ್ಲೇ ಪರಿಹಾರ ಸೂಚಿಸಿದರು.
ರೈತ ಮುಖಂಡರಾದ ಹಂಗಳ ಮಾಧು, ದಿಲೀಪ್, ವಿಜಯಕುಮಾರ್, ಪ್ರಕಾಶ್ ಪ್ರಗತಿಪರ ರೈತರು, ಮಹಿಳಾ ರೈತರು ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.