ಕೊಳೇಗಾಲ ತಾಲೂಕು ಕಾಮಗೆರೆ ಗ್ರಾಮದ ಒಕ್ಕಲಿಗರ ಬೀದಿಯಲ್ಲಿ ಶ್ರೀ ಸಿದ್ದಪ್ಪಾಜಿ ಕಂಡಾಯೋತ್ಸವ ನೆರವೇರಿತು.
Published on:
Copied
Follow Us
ಕೊಳ್ಳೇಗಾಲ: ತಾಲೂಕಿನ ಕಾಮಗೆರೆ ಗ್ರಾಮದ ಒಕ್ಕಲಿಗರ ಬೀದಿಯಲ್ಲಿ ಗಾಳಿ ಮರಿ ಹಬ್ಬದ ಅಂಗವಾಗಿ ಸೋಮವಾರ ಶ್ರೀ ಸಿದ್ದಪ್ಪಾಜಿ ಕಂಡಾಯೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕಂಡಾಯಗಳಿಗೆ ಹೂ-ಹೊಂಬಾಳೆ ಧರಿಸಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯವರು ಪೂಜೆ ಸಲ್ಲಿಸಿದರು. ಗ್ರಾಮದ ಮುಖಂಡರಾದ ಕುಮಾರಗೌಡ, ಮರಿಸ್ವಾಮಿಗೌಡ, ಬಾಬು, ರಾಜು, ಮಂಜುನಾಥ್, ಚಂದ್ರಶೇಖರ, ಪ್ರಶಾಂತ್, ರವಿ, ನಾಗೇಂದ್ರ, ರಾಘು, ರವಿ ಇತರರು ಇದ್ದರು.