ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ

ಸೌಮ್ಯ
ಸೌಮ್ಯ
Published on
ಹನೂರು: ದುಬೈನಲ್ಲಿ ಶನಿವಾರ ನಡೆದ ಏಷ್ಯನ್ ಗೇಮ್ಸ್ 2025 ಯೂತ್ ಪ್ಯಾರಗನ್ಸ್‌ನ ಮಹಿಳಾ ವಿಭಾಗದ ಓಟದ ಸ್ಪರ್ಧೆಯಲ್ಲಿ ತಾಲೂಕಿನ ರಾಮಾಪುರದ ಗೆಜ್ಜಲನತ್ತ ಗ್ರಾಮದ ವಿದ್ಯಾರ್ಥಿ ಸೌಮ್ಯಾ 2 ಚಿನ್ನದ ಪದಕ ಗಳಿಸಿದ್ದಾರೆ.
ಸೌಮ್ಯಾ ಅವರ ತಂದೆ ನಾಗಣ್ಣ ಹಾಗೂ ತಾಯಿ ಕವಿತಾ ಅವರು ಹಲವು ವರ್ಷದ ಹಿಂದೆ ನಿಧನರಾಗಿದ್ದು, ಬೆಂಗಳೂರಿನಲ್ಲಿ ಪಿಯು ಶಿಕ್ಷಣ ಪಡೆಯುತ್ತಿದ್ದಾರೆ. ನಡೆದ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಯಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿದ್ದರು. ಶನಿವಾರ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ 400 ಮೀ ಹಾಗೂ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಜಯಗಳಿಸಿ 2 ಚಿನ್ನದ ಪದಕವನ್ನು ಪಡೆದು ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿ ಸೌಮ್ಯಾ ಅವರ ಸಾಧನೆಯ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಜ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net