ಮುಡಿಗುಂಡ ಗ್ರಾಮದ ಮಠದ ಬೀದಿಯಲ್ಲಿ ಮಕ್ಕಳು ಕಪ್ಪೆಗಳ ಮದುವೆಯೊಂದಿಗೆ ಮರದ ಬಸವ ಹೊತ್ತು ಮೆರವಣಿಗೆ ಮಾಡಿದರು.
Published on:
Copied
Follow Us
ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಗ್ರಾಮದ ಮಠದ ಬೀದಿಯಲ್ಲಿ ಮಳೆಗಾಗಿ ಮಕ್ಕಳು ಕಪ್ಪೆಗಳಿಗೆ ಮದುವೆ ಮಾಡಿ, ಮರದ ಬಸವ ಹೊತ್ತು ಮೆರವಣಿಗೆ ಮಾಡುವ ಮೂಲಕ ಸೋಮವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ತೀವ್ರ ಬೇಸಿಗೆಯಿಂದ ಕರೆ-ಕಟ್ಟೆಗಳು ಬಣಗುಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಬಡಾವಣೆಯಲ್ಲಿ ವರುಣನ ಬಳಿ ಮಳೆ ಸುರಿಸುವಂತೆ ಬೇಡಿಕೆ ಇಟ್ಟರು. ಕಪ್ಪೆಗಳ ಮದುವೆ ಮಾಡಿಸಿ ಮರದ ಬಸವ ಹೊತ್ತು ಪ್ರತಿ ಮನೆ ಮನೆ ಮುಂಭಾಗ ತೆರಳಿ ಉಯ್ಯೋ ಉಯ್ಯೋ ಮಳೆರಾಯ.. ಬಸವನ ಕಟ್ಟೆಗೆ ನೀರಿಲ್ಲ ಎಂದು ವರುಣ ದೇವರನ್ನು ಪ್ರಾರ್ಥಿಸಿದರು.
ಈ ವೇಳೆ ಸ್ಥಳೀಯರು ಬಸವನಿಗೆ ನೀರಿನ ಅಭಿಷೇಕ ಮಾಡಿದರು. ರಾಗಿ ಅಂಬಲಿ, ಉರುಳಿ ನುಗ್ಗೆ ಸೊಪ್ಪಿನ ಪಲ್ಯ, ಬೆಲ್ಲದ ಅನ್ನವನ್ನು ಜನರಿಗೆ ವಿತರಣೆ ಮಾಡಲಾಯಿತು.