ಉಚಿತ ತಪಾಸಣೆ ಶಿಬಿರಗಳಿಂದ ಶ್ರೀಸಾಮಾನ್ಯರಿಗೆ ಅನುಕೂಲ

ಗುಂಡ್ಲುಪೇಟೆ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಸತೀಶ್ ಉದ್ಘಾಟಿಸಿದರು. ಕೆ.ಎನ್.ಮಹದೇವಸ್ವಾಮಿ, ರಾ.ಬಾಬು, ಸಿದ್ದಪ್ಪ , ಭೈರೇಶ್ ಗಾಣಿಗ್, ಮಂಜುಕುಮಾರ್, ಶಂಕರ ನಾರಾಯಣ ಜೋಯಿಸ್, ಶಿವಪ್ರಸಾದ್, ನಾಗೇಂದ್ರ , ಕೆ.ರಮೇಶ್, ಸುಬ್ರಹ್ಮಣ್ಯ ಇದ್ದರು.
ಗುಂಡ್ಲುಪೇಟೆ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಸತೀಶ್ ಉದ್ಘಾಟಿಸಿದರು. ಕೆ.ಎನ್.ಮಹದೇವಸ್ವಾಮಿ, ರಾ.ಬಾಬು, ಸಿದ್ದಪ್ಪ , ಭೈರೇಶ್ ಗಾಣಿಗ್, ಮಂಜುಕುಮಾರ್, ಶಂಕರ ನಾರಾಯಣ ಜೋಯಿಸ್, ಶಿವಪ್ರಸಾದ್, ನಾಗೇಂದ್ರ , ಕೆ.ರಮೇಶ್, ಸುಬ್ರಹ್ಮಣ್ಯ ಇದ್ದರು.
Published on

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸತೀಶ್ ಅಭಿಮತ

ಗುಂಡ್ಲುಪೇಟೆ: ಕಣ್ಣಿನ ಉಚಿತ ತಪಾಸಣೆ ಶಿಬಿರಗಳು ಶ್ರೀಸಾಮಾನ್ಯರು ಹಾಗೂ ಬಡಜನತೆಗೆ ವರದಾನವಾಗಿವೆ ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸತೀಶ್ ಹೇಳಿದರು.
ಶನಿವಾರ ಪಟ್ಟಣದ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ, ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಸಾರ್ವಜನಿಕರಿಗೂ ಕಣ್ಣು ಬಹು ಮುಖ್ಯವಾದ ಅಂಗವಾಗಿದೆ. ಕಣ್ಣಿಲ್ಲ ಅಂದರೆ ಪ್ರಪಂಚ ನೋಡಲು ಸಾಧ್ಯವಿಲ್ಲ. ಅದರಲ್ಲೂ ಕಡು ಬಡವರ ಪಾಲಿಗೆ ತುಂಬ ಕಷ್ಟ. ಸಮಾಜಮುಖಿ ಕೆಲಸ ಮಾಡುವ ಪತ್ರಕರ್ತರ ಸಂಘವು ಪ್ರತಿ ತಿಂಗಳು ಇಂತಹ ಉಚಿತ ಶಿಬಿರಗಳ ಆಯೋಜನೆಯಿಂದ ನೂರಾರು ಬಡವರಿಗೆ ಅನುಕೂಲವಾಗುತ್ತಿದೆ. ಪ್ರತಿಯೊಬ್ಬರೂ ಕೂಡ ಕಣ್ಣಿನ ತಪಾಸಣೆ ಶಿಬಿರವನ್ನು ಸದುಪಯೋಗಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಅರವಿಂದ ಕಣ್ಣಾಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಮಾತನಾಡಿ, ಜನರ ನಿರ್ಲಕ್ಷ್ಯದಿಂದ ಅಥವಾ ಪೋಷಕಾಂಶಗಳ ಕೊರತೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಹಲವರು ಕಣ್ಣಿನ ಸಮಸ್ಯೆಗೆ ಸಿಲುಕುತ್ತಾರೆ. ಯುವಜನತೆ ಹಾಗೂ ಮಕ್ಕಳು ಅತಿ ಹೆಚ್ಚಿನ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಕಣ್ಣಿನ ಸುರಕ್ಷತೆಗಾಗಿ ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಸ್ವಯಂಸೇವಾ ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿವೆ ಎಂದರು.
ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ಜಿಲ್ಲಾ ಸಂಚಾಲಕ ರಾ.ಬಾಬು, ಸಂಘದ ನಿರ್ದೇಶಕರಾದ ಸಿದ್ದಪ್ಪ, ಭೈರೇಶ್ ಗಾಣಿಗ್, ಮಂಜುಕುಮಾರ್, ಶಂಕರ ನಾರಾಯಣ ಜೋಯಿಸ್, ಶಿವಪ್ರಸಾದ್, ನಾಗೇಂದ್ರ , ಅನುಗ್ರಹ ಫೌಂಡೇಷನ್ ಸಂಚಾಲಕ ಕೆ.ರಮೇಶ್, ಪಶುಪಾಲನೆ ಇಲಾಖೆಯ ಸುಬ್ರಹ್ಮಣ್ಯ ಹಾಗೂ ಸಾರ್ವಜನಿಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net