ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕೆ ಫುಡ್‌ಕೋರ್ಟ್

ಗುಂಡ್ಲುಪೇಟೆ ಪಟ್ಟಣದ ಸೆಸ್ಕ್ ಕಚೇರಿ ಸಮೀಪ ರಸ್ತೆ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಚಾಲನೆ ನೀಡಿದರು. ಎಚ್.ಎಸ್.ನಂಜುಂಡಪ್ರಸಾದ್, ಶರವಣ, ಮಧುಸೂದನ್, ಶಶಿಧರ, ವೆಂಕಟಾಚಲ ಇದ್ದರು.
ಗುಂಡ್ಲುಪೇಟೆ ಪಟ್ಟಣದ ಸೆಸ್ಕ್ ಕಚೇರಿ ಸಮೀಪ ರಸ್ತೆ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಚಾಲನೆ ನೀಡಿದರು. ಎಚ್.ಎಸ್.ನಂಜುಂಡಪ್ರಸಾದ್, ಶರವಣ, ಮಧುಸೂದನ್, ಶಶಿಧರ, ವೆಂಕಟಾಚಲ ಇದ್ದರು.
Published on
ಗುಂಡ್ಲುಪೇಟೆ: ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಜತೆಗೆ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕೆ ಫುಡ್‌ಕೋರ್ಟ್ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಸೆಸ್ಕ್ ಕಚೇರಿ ಸಮೀಪ 5 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆಯೇ ಪುರಸಭೆಯು ಸೆಸ್ಕ್ ಸಮೀಪ ಫುಡ್‌ಕೋರ್ಟ್ ನಿರ್ಮಿಸಿದ್ದರೂ ರಸ್ತೆ, ಮೂಲಸೌಕರ್ಯಗಳ ಕೊರತೆಯಿಂದ ನಿರುಪಯುಕ್ತವಾಗಿತ್ತು. ಸಮೀಪದಲ್ಲೇ ಶೌಚಗ್‌ಋಹ ಇರುವುದರಿಂದ ಶುಚಿತ್ವ ಕೊರತೆಯಿಂದ ಸಾರ್ವಜನಿಕರು ಫುಡ್‌ಕೋರ್ಟ್ ಬಳಕೆಗೆ ಹಿಂಜರಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅವರನ್ನು ಮಡಹಳ್ಳಿ ರಸ್ತೆಗೆ ಸ್ಥಳಾಂತರಿಸಲಾಗಿತ್ತು. ಮುಖ್ಯಮಂತ್ರಿಗಳ 5 ಕೋಟಿ ರೂ.ಅನುದಾನದಲ್ಲಿ ರಸ್ತೆಗಳ ನಿರ್ಮಾಣ ಮಾಡುವ ಜತೆಗೆ ಸುಸಜ್ಜಿತ ಫುಡ್‌ಕೋರ್ಟ್ ಆರಂಭಿಸಲಾಗುವುದು. ಅಲ್ಲದೆ, ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಪಟ್ಟಣದಲ್ಲಿ ಹೊಸ ಸಂಚಾರ ಪೊಲೀಸ್ ಠಾಣೆ ತೆರೆಯಲಾಗುತ್ತಿದೆ. ಪಟ್ಟಣದ ಸ್ವಚ್ಛತೆ ಹಾಗೂ ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಶರವಣ, ಮಾಜಿ ಅಧ್ಯಕ್ಷ ಮಧುಸೂದನ್, ಶಶಿಧರ, ವೆಂಕಟಾಚಲ, ಮಾಜಿ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net