ಗುಂಡ್ಲುಪೇಟೆ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಏಳನೇ ವರ್ಷದ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು. ಮಠಾಧೀಶರು, ಮುಖಂಡರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೂಡಗೂರು ಮಠದ ಇಮ್ಮಡಿ ಉದ್ದಾನ ಸ್ವಾಮೀಜಿ ಹೇಳಿಕೆ
ಗುಂಡ್ಲುಪೇಟೆ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ಭಾನುವಾರ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಏಳನೇ ವರ್ಷದ ಪುಣ್ಯ ಸ್ಮರಣೆ ಆಚರಿಸಲಾಯಿತು.
ತಾಲೂಕಿನ ವಿವಿಧ ಮಠಾಧೀಶರು ಸಮುದಾಯದ ಮುಖಂಡರು ಹಾಗೂ ಯುವಕರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಮೂಡಗೂರು ಮಠದ ಇಮ್ಮಡಿ ಉದ್ದಾನ ಸ್ವಾಮೀಜಿ ಮಾತನಾಡಿ, ತ್ರಿವಿಧ ದಾಸೋಹದ ಮೂಲಕ ಹೆಸರಾಗಿ ಮನುಕುಲದ ನಿಜವಾದ ಸಂತನಾಗಿ ಪ್ರಜ್ವಲಿಸಿದ ಶ್ರೀಗಳ ಆದರ್ಶವೇ ನಮಗೆ ದಾರಿ ದೀಪವಾಗಿದೆ. ಅಂತಹ ಮಹಾನ್ ದೈವಿಕ ಮತ್ತು ಮಾನವೀಯ ಅಂತಃಕರಣವಿದ್ದ ಶ್ರೀಗಳ ಆದರ್ಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಆಚರಣೆಯನ್ನು ಅರ್ಥಪೂರ್ಣವಾಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಬ್ಬಹಳ್ಳಿ ಮಠದ ಚನ್ನಬಸವಸ್ವಾಮೀಜಿ, ಬೊಮ್ಮನಹಳ್ಳಿ ಪಟ್ಟದ ಮಠದ ಇಮ್ಮಡಿ ಶಾಂತಮಲ್ಲ ಸ್ವಾಮೀಜಿ, ತಹಸೀಲ್ದಾರ್ ಎಂ.ಎಸ್.ತನ್ಮಯ್, ವೀರಶೈವ ಲಿಂಗಾಯತ ಸಮುದಾಯದ ಹಿರಿಯ, ಕಿರಿಯ ಮುಖಂಡರು ಭಾಗಿಯಾಗಿದ್ದರು.